ಹೊಸದಿಗಂತ ಡಿಜಿಟಲ್ ಡೆಸ್ಕ್
ಶ್ರದ್ಧಾ ವಾಕರ್‌ಳನ್ನು ಆಕೆಯ ಸಂಗಾತಿ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದ ಘಟನೆ ನಡೆದ ಬೆನ್ನಲ್ಲೇ ದೆಹಲಿಯಲ್ಲಿ ಮೊತ್ತೊಂದು ಭೀಕರ ಕೃತ್ಯ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ತನ್ನ ಲಿವ್-ಇನ್ ಗೆಳತಿಯ ಕತ್ತು ಸೀಳಿ ಹತ್ಯೆಗೈದಿದ್ದಾನೆ.
ದೆಹಲಿಯ ತಿಲಕ್ ನಗರದಲ್ಲಿ ರೇಖಾ ಎಂಬ 35 ವರ್ಷದ ಮಹಿಳೆಯನ್ನು ಆಕೆಯ ಗೆಳೆಯ ಮನ್‌ಪ್ರೀತ್ ಸಿಂಗ್ (45) ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮನ್ ಪ್ರೀತ್ ಗೆ 2006 ರಲ್ಲೇ ವಿವಾಹವಾಗಿ ಇಬ್ಬರು ಗಂಡು ಮಕ್ಕಳೀದ್ದರು. 2015 ರಲ್ಲಿ ಆತ ಸ್ನೇಹಿತೆಯ ಮೂಲಕ ರೇಖಾಳೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಅವಳೊಂದಿಗೆ ಗಣೇಶನಗರದಲ್ಲಿ ವಾಸಿಸತೊಡಗಿ ಅವಳ ಖರ್ಚುಗಳನ್ನು ಭರಿಸಲಾರಂಭಿಸಿದನು. ಸಿಂಗ್ ತನ್ನ ಮೊದಲ ಹೆಂಡತಿ ಮತ್ತು ಮಕ್ಕಳ ಬಳಿಗೆ ಮರಳಲು ಬಯಸುತ್ತಿರುವ ಬಗ್ಗೆ ರೇಖಾ ಇತ್ತೀಚೆಗೆ ಅನುಮಾನಗೊಂಡಿದ್ದಳು. ಅವರೊಂದಿಗಿನ ಸಂಬಂಧವನ್ನು ಕಡಿತಗೊಳಿಸುವಂತೆ ಆಕೆ ಹೇಳಿದ್ದಳು. ಮತ್ತು ಪಂಜಾಬ್‌ನಲ್ಲಿ ಅವರನ್ನು ಭೇಟಿ ಮಾಡದಂತೆ ತಡೆಯುತ್ತಿದ್ದಳು ಎನ್ನಲಾಗಿದೆ. ಜೊತೆಗೆ ಆತನ ಕ್ರಿಮಿನಲ್ ಚಟುವಟಿಕೆಗಳನ್ನು ಬಯಲಿಗೆಳೆಯುವುದಾಗಿ ರೇಖಾ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡಿದ್ದ ಆಕೆಯನ್ನು ಕೊಲೆಗೈದಿದ್ದಾನೆ. ಆ ಬಳಿಕ ರೇಖಾ 16 ವರ್ಷದ ಮಗಳಿಗೆ ನಿದ್ರೆ ಮಾತ್ರೆ ನೀಡಿ ಶುಕ್ರವಾರ ಬೆಳಗ್ಗೆ ಪಂಜಾಬ್‌ಗೆ ಪರಾರಿಯಾಗಿದ್ದಾನೆ. ಆ ಬಳಿಕ ಪಟಿಯಾಲದ ಅವನ ಗ್ರಾಮದಿಂದ ಅವರನ್ನು ಬಂಧಿಸಲಾಗಿದೆ.
ಎಫ್‌ಐಆರ್ ದಾಖಲಿಸಿರುವ ಬಾಲಕಿ ಪೊಲೀಸರಿಗೆ, “ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಎಚ್ಚರವಾದಾಗ ಮನ್‌ಪ್ರೀತ್ ಚಿಕ್ಕಪ್ಪ ಮೈಗ್ರೇನ್‌ಗೆ ಕೆಲವು ಮಾತ್ರೆಗಳನ್ನು ನೀಡಿ ನನ್ನನ್ನು ಮಲಗಲು ಹೇಳಿದರು. ಸ್ವಲ್ಪ ಸಮಯದ ನಂತರ ನನಗೆ ಅನುಮಾನ ಬಂದು ನನ್ನ ತಾಯಿಯ ಬಗ್ಗೆ ಕೇಳಿದೆ. ಅವಳು ಮಾರುಕಟ್ಟೆಗೆ ಹೋಗಿದ್ದಾಳೆ ಎಂದು ಆತ ಹೇಳಿದ. ಅವರು ಐ20 ಕಾರಿನಲ್ಲಿ ತೆರಳಿದ ನಂತರ ಸೋದರಸಂಬಂಧಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದ್ದಾಳೆ. ಪೊಲೀಸರು ತಮ್ಮ ಕೊಠಡಿಯ ಬಾಗಿಲು ಒಡೆದು ತೆರೆದು ನೋಡಿದಾಗ ರೇಖಾ ಅವರ ಮುಖ ಮತ್ತು ಕುತ್ತಿಗೆಯ ಮೇಲೆ ಹಲವು ಬಾರಿ ಇರಿತವಾಗಿದ್ದು, ಆಕೆಯ ಬಲ ಉಂಗುರದ ಬೆರಳನ್ನು ಛಿದ್ರಗೊಳಿಸಿರುವುದು ಕಂಡುಬಂದಿದೆ.