ಭಾರತ ಈಗಾಗಲೇ ಹಿಂದೂ ರಾಷ್ಟ್ರ, ಮತ್ತೆ ಘೋಷಣೆಯ ಅಗತ್ಯವಿಲ್ಲ: ಹೊಸಬಾಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವು ಈಗಾಗಲೇ ’ಹಿಂದೂ ರಾಷ್ಟ್ರ’ವಾಗಿದ್ದು, ಇದು ‘ಸಾಂಸ್ಕೃತಿಕ ಪರಿಕಲ್ಪನೆ’ಯನ್ನು ಹೊಂದಿದ್ದು, ಇದನ್ನು ಸಂವಿಧಾನದ ಮೂಲಕ ಮತ್ತೆ ಹೊಸದಾಗಿ ಘೋಷಿಸಬೇಕಾದ ಅಗತ್ಯವೇನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯಹಾವ ದತ್ತಾತ್ರೇಯ ಹೊಸಬಾಳೆ ಮಂಗಳವಾರ ಇಲ್ಲಿ ಹೇಳಿದರು.

ರಾಷ್ಟ್ರ ಮತ್ತು ‘ಸ್ಟೇಟ್’ ಎರಡು ವಿಭಿನ್ನ ವಿಷಯಗಳು. ರಾಷ್ಟ್ರವು ‘ಸಾಂಸ್ಕೃತಿಕ ಪರಿಕಲ್ಪನೆ’ ಆಗಿದ್ದರೆ, ರಾಜ್ಯವು ಸಂವಿಧಾನದಿಂದ ಸ್ಥಾಪಿಸಲ್ಪಟ್ಟಿದೆ. ಅದು ರಾಜ್ಯ ಶಕ್ತಿ.ನಾವು ಹಿಂದು ರಾಷ್ಟ್ರದ ಬಗ್ಗೆ ಕಳೆದ 100 ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಇದು ಸಿದ್ಧಾಂತವಲ್ಲ, ಬದಲಿಗೆ ಸಾಂಸ್ಕೃತಿಕ ಪರಿಕಲ್ಪನೆ ಆಧಾರಿತವಾದುದು ಎಂಬುದನ್ನು ಇಲ್ಲಿ ಅವರು ಒತ್ತಿ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿ ಸಭಾದ ಸಮಾರೋಪದ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಹುಲ್ ಗಾಂಧಿ ಹೊಣೆಗಾರಿಕೆಯಿಂದ ಮಾತನಾಡಲಿ

ಲಂಡನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೆಸ್ಸೆಸ್ಸನ್ನು ಪದೆ ಪದೆ ಗುರಿಯಾಗಿಸಿ ದೂಷಿಸಿರುವ ಬಗ್ಗೆ ಕೇಳಿದಾಗ , ರಾಹುಲ್ ಗಾಂಧಿ ಹೆಚ್ಚು ಜವಾಬ್ದಾರಿಯುತರಾಗಿ ಮಾತನಾಡಬೇಕು .ಅವರು ಪ್ರಾಯಶಃ ತನ್ನ ರಾಜಕೀಯ ಅಜೆಂಡಾಕ್ಕೆ ಅನುಗುಣವಾಗಿ ಮಾತನಾಡಿರಬೇಕು. ಆದರೆ ಅವರು ಸಂಘದ ವಿಸ್ತಾರ ಮತ್ತು ಸಮಾಜ ಸಂಘವನ್ನು ಒಪ್ಪಿ ಸ್ವೀಕರಿಸಿರುವುದನ್ನು ಮೊದಲು ಗಮನಿಸಿ ಅನಂತರ ಮಾತನಾಡಲಿ ಎಂಬುದಾಗಿ ಹೊಸಬಾಳೆ ಬುದ್ಧಿವಾದ ಹೇಳಿದರು.

ದೇಶವನ್ನೇ ಜೈಲಾಗಿಸಿದವರಿಂದ ಪ್ರಜಾತಂತ್ರದ ಬಗ್ಗೆ ಮಾತು ಕ್ಲೀಷೆ

ಸಂಘ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವುದಿಲ್ಲ .ಆದ್ದರಿಂದ ರಾಹುಲ್‌ಗೆ ಆರೆಸ್ಸೆಸ್ ಪೈಪೋಟಿ ಅಲ್ಲ ಎಂದ ದತ್ತಾತ್ರೇಯ ಹೊಸಬಾಳೆಯವರು, ರಾಹುಲ್ ಗಾಂಧಿ ಲಂಡನ್‌ನಲ್ಲಿ ಭಾರತದಲ್ಲಿ ಪ್ರಜಾತಂತ್ರ ನಾಶವಾಗುತ್ತಿದೆ ಎಂಬ ಹೇಳಿಕೆ ನೀಡಿರುವ ಪ್ರಶ್ನೆಗೆ ಉತ್ತರಿಸಿ , ದೇಶವನ್ನೇ ಜೈಲಾಗಿಸಿದವರು ಪ್ರಜಾತಂತ್ರದ ಬಗ್ಗೆ ಮಾತನಾಡುವುದು ಕ್ಲೀಷೆಯೆನಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಕಾಂಗ್ರೆಸ್ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರತಿಪಕ್ಷ ನಾಯಕರು ಮತ್ತು ಕಾರ್ಯಕರ್ತರು ಸೇರಿದಂತೆ ಕೋಟ್ಯಂತರ ನಾಗರಿಕರನ್ನು ಅಮಾನುಷವಾಗಿ ಹಿಂಸಿಸಿ ಜೈಲಿಗಟ್ಟಿದ್ದನ್ನು ಉಲ್ಲೇಖಿಸಿ ರಾಹುಲ್ ಗಾಂ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಸಲಿಂಗ ವಿವಾಹ ಸಲ್ಲದೆಂಬ ಕೇಂದ್ರ ನಿಲುವಿಗೆ ಸಹಮತ

ಸಲಿಂಗ ವಿವಾಹ ಸಲ್ಲದು, ವಿಭಿನ್ನ ಲಿಂಗಿಗಳ ನಡುವೆ ವಿವಾಹ ನಡೆಯುವುದು ನಮ್ಮ ರಾಷ್ಟ್ರದ ಸಂಸ್ಕೃತಿ ಎಂಬ ಕೇಂದ್ರ ಸರ್ಕಾರದ ನಿಲುವನ್ನು ಸಂಘ ಒಪ್ಪುವುದಾಗಿ ಹೇಳಿರುವ ಹೊಸಬಾಳೆ, ಮದುವೆಗಳು ಎರಡು ವಿಭಿನ್ನ ಲಿಂಗಗಳಿಗೆ ಸೇರಿದ ಜನರ ನಡುವೆ ಮಾತ್ರವೇ ನಡೆಯಬೇಕು ಎಂದು ಹೇಳಿದ್ದಾರೆ.
ಮುಸ್ಲಿಮರನ್ನು ತಲುಪುವ ಸಂಘದ ಪ್ರಯತ್ನದ ಬಗ್ಗೆ ಕೇಳಿದಾಗ, ಸಂಘದ ನಾಯಕರು ಮುಸ್ಲಿಂ ಬುದ್ಧಿಜೀವಿಗಳನ್ನು ಹಾಗೂ ಅವರ ಆಧ್ಯಾತ್ಮಿಕ ಗುರುಗಳನ್ನು ಅವರ ಆಹ್ವಾನದ ಮೇರೆ ಭೇಟಿ ಮಾಡುತ್ತಿದ್ದಾರೆ ಎಂದು ನುಡಿದರು.

ಭಾರತೀಯ ಅಸ್ಮಿತೆ

ಸ್ವಾತಂತ್ರ್ಯದ ಅಮೃತಕಾಲದ ಈ ಸಮಯದಲ್ಲಿ ಭಾರತದ ಅಸ್ಕಿತೆಯು, ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಪ್ರತಿಯೊಬ್ಬರ ಹೆಮ್ಮೆಯಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತವು ಆರ್ಥಿಕವಾಗಿ ಮತ್ತು ಮೂಲಸೌಕರ್ಯದಲ್ಲಿ ಬೆಳವಣಿಗೆ ಹೊಂದುವುದು ಮಾತ್ರವಲ್ಲ, ಕ್ರೀಡೆ ಹಾಗೂ ಸಂಸ್ಕೃತಿಯಂತಹ ಇತರೆ ಅನೇಕ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಸಲಿದೆ ಎಂದು ಹೊಸಬಾಳೆಯವರು ವಿಶ್ವಾಸದಿಂದ ಹೇಳಿದರು.

ಶಿವಾಜಿ ಮಹಾರಾಜರ 350 ನೇ ವರ್ಷಾಚರಣೆ ದೇಶಕ್ಕೆ ಹೆಮ್ಮೆ

ಜೇಷ್ಠ ಶುದ್ಧ ತ್ರಯೋದಶಿಯಂದು ಹಿಂದವಿ ಸ್ವರಾಜ್ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ 350ನೇ ವರ್ಷಾಚರಣೆಯನ್ನು ಈ ವರ್ಷ ದೇಶ ಆಚರಿಸಲಿದ್ದು, ಶಿವಾಜಿ ಮಹಾರಾಜರು ಭಾರತೀಯರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಮೂಡಿಸಿದ ಮಹಾಪುರುಷರಲ್ಲಿ ಒಬ್ಬರಾಗಿದ್ದು, ಈ ಸಂದರ್ಭ ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಚರಿಸಲಾಗುವುದು.ಸ್ವಯಂಸೇವಕರು ಹಾಗೂ ಸಮಾಜದ ಎಲ್ಲ ವರ್ಗಗಳ ಜನತೆ ಈ ಯುಗಪುರುಷನ ಸಂಸ್ಮರಣೆಯೊಂದಿಗೆ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಅವರು ಕರೆಯಿತ್ತರು.

ಭಗವಾನ್ ಮಹಾವೀರ ಸ್ವಾಮಿಯ ನಿರ್ವಾಣದ 2550 ನೇ ವರ್ಷಾಚರಣೆ

ಎಂಟು ಕರ್ಮಗಳನ್ನು ದಾಟಿ ಕಾರ್ತಿಕ ಅಮಾವಾಸ್ಯೆಯಂದು ನಿರ್ವಾಣ ಸಾಸಿದ ಭಗವಾನ್ ಮಹಾವೀರರ ನಿರ್ವಾಣದ 2550  ನೇ ವರ್ಷಾಚರಣೆಯೂ ಈ ವರ್ಷ ನಡೆಯಲಿದ್ದು, ಸಮಾಜದ ಕಲ್ಯಾಣ, ಮಾನವೀಯತೆಗೆ ಸರ್ವೋಚ್ಚ ಸೇವೆ ಸಮರ್ಪಿಸಿದ ಭಗವಾನ್ ಮಹಾವೀರರು ನೀಡಿದ ಪಂಚತತ್ವಗಳು ಮನುಕುಲದ ಕಲ್ಯಾಣ ಮಾರ್ಗಗಳಾಗಿವೆ. ಸತ್ಯ, ಅಹಿಂಸೆ, ಅಸ್ತೇಯ (ಕದಿಯದಿರುವಿಕೆ), ಅಪರಿಗ್ರಹ, ಬ್ರಹ್ಮಚರ್ಯದಂತಹ ಅಂಶಗಳನ್ನು ಅವರು ಒತ್ತಿಹೇಳಿರುವುದನ್ನು ಪ್ರಸ್ತಾವಿಸಿದರು.ಲಿಂಗ ತಾರತಮ್ಯ ನಿವಾರಣೆ ಮತ್ತು ಮಹಿಳೆಯರ ಕೊಡುಗೆಗಳನ್ನು ಗುರುತಿಸಿ ಗೌರವಿಸುವಲ್ಲಿ ಅವರ ಬೋಧನೆಗಳು ಅನನ್ಯ . ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ವರ್ಷಾಚರಣೆಯಲ್ಲಿ ವಿಶೇಷವಾಗಿ ತೊಡಗಿಕೊಳ್ಳಲಿದ್ದು, ಸ್ವಯಂಸೇವಕರು ಭಗವಾನ್ ಮಹಾವೀರರ ಬೋಧನೆಗಳ ಪ್ರಸಾರಕ್ಕೆ ಮುಂದಾಗಬೇಕು .ಭಾರತ ‘ವಿಶ್ವಗುರು’ವಾಗಿ ಮೂಡಿಬರುತ್ತಿರುವ ಈ ಸಂದರ್ಭದಲ್ಲಿ ಮಹಾವೀರರನ್ನು ವಿಶೇಷವಾಗಿ ಸ್ಮರಿಸುತ್ತದೆ ಎಂದರು.

ಮಹರ್ಷಿ ದಯಾನಂದ ಸರಸ್ವತಿ ಸ್ಮರಣೆ
“ಮತ್ತೆ ವೇದಗಳತ್ತ ಮರಳಿ ” ಘೋಷಣೆ ಮೊಳಗಿಸಿ ಸಮಾಜದಲ್ಲಿ ಧರ್ಮ, ಅಧ್ಯಾತ್ಮವನ್ನು ಜಾಗೃತಗೊಳಿಸಿ ವಿಕೃತಿಗಳನ್ನು ತೊಲಗಿಸಿ ಸಾಂಸ್ಕೃತಿಕ ಕ್ರಾಂತಿಗೈದ ಮಹರ್ಷಿ ದಯಾನಂದ ಸರಸ್ವತಿ ಅವರ ೨೦೦ನೇ ವರ್ಷಾಚರಣೆಯ ಸಂದರ್ಭ ಸಂಘದ ಸ್ವಯಂಸೇವಕರು ಅವರ ವಿಚಾರಗಳನ್ನು ಪ್ರಚುರಗೊಳಿಸಬೇಕು ಎಂದು ಕರೆಯಿತ್ತರು.ಸ್ವದೇಶಿ, ಸ್ವಭಾಷಾ, ಸ್ವಬೋಧ್‌ಗಳಿಲ್ಲದೆ ಸ್ವರಾಜ್ ಸಾಸಲಾಗದು ಎಂದಿದ್ದ ಅವರು , ಗೋ ಆಧಾರಿತ ಕೃಷಿಯನ್ನು ಒತ್ತಿ ಹೇಳಿದ್ದರು.‘ಕೃಣ್ವಂತೋ ವಿಶ್ವಮಾರ್ಯಂ’ ಎಂಬ ಅವರ ಕರೆ ಅನನ್ಯವಾದುದು.
ಸರಳತೆ, ಕಠಿಣ ದುಡಿಮೆ, ತ್ಯಾಗ, ಸಮರ್ಪಣೆ, ನಿರ್ಭಯತೆ, ವಿಧೇಯತೆಯ ಅವರ ಚಿಂತನೆಗಳು , ಅಸ್ಪೃಶ್ಯತೆ ನಿವಾರಣೆ, ಮೇಲರಿಮೆ, ಕೀಳರಿಮೆಗಳ ನಿವಾರಣೆಯಲ್ಲಿ ಅವರ ಕೊಡುಗೆಗಳು ಅಸಮಾನ್ಯವಾಗಿದ್ದು, ಸಂಘ ಅವರನ್ನು ವಿಶೇಷವಾಗಿ ಸ್ಮರಿಸುತ್ತದೆ ಎಂದರು.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!