Monday, October 2, 2023

Latest Posts

ಹೊಸ ಇತಿಹಾಸ ನಿರ್ಮಿಸಿದ ಭಾರತ: ಜಿ-2 ಶೃಂಗಸಭೆಯಲ್ಲಿ ನ್ಯೂ ಡೆಲ್ಲಿ ಡಿಕ್ಲರೇಷನ್​ ಅಂಗೀಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಜಿ-20 ಶೃಂಗಸಭೆಯಲ್ಲಿ ನ್ಯೂ ಡೆಲ್ಲಿ ಡಿಕ್ಲರೇಷನ್​ ಅಂಗೀಕರಿಸುವ ಮೂಲಕ ಭಾರತ ಹೊಸ ಇತಿಹಾಸವನ್ನು ನಿರ್ಮಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡ ಅವರು, ನಮಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ನಮ್ಮ ತಂಡದ ಕಠಿಣ ಪರಿಶ್ರಮದಿಂದಾಗಿ ನ್ಯೂ ಡೆಲ್ಲಿ ಡಿಕ್ಲರೇಷನ್​​ ಅಂಗೀಕಾರವಾಗಿದೆ. ಪ್ರತ್ಯೇಕವಾಗಿ ಹಾಗೂ ಪರೋಕ್ಷವಾಗಿ ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಪ್ರಧಾನಿ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ದಿ ಡೆಲ್ಲಿ ಡಿಕ್ಲರೇಷನ್​​ ಅಳವಡಿಕೆಯೊಂದಿಗೆ ಇತಿಹಾಸವನ್ನು ಸೃಷ್ಟಿಸಲಾಗಿದೆ. ಒಮ್ಮತ ಮತ್ತು ಸಾಮರಸ್ಯದ ಭವಿಷ್ಯಕ್ಕಾಗಿ ಕೆಲಸ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡುತ್ತೇವೆ. ಇದಕ್ಕೆ ಸಹಕರಿಸಿದ ಎಲ್ಲಾ ಜಿ-20 ನಾಯಕರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!