ಮತ್ತೆ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ ‘ಇಂಡಿಯಾ ಮಹಾರಾಜ’ರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 20 ರಿಂದ ಮತ್ತೊಂದು ಕ್ರೀಡಾ ಸಂಭ್ರಮ ನಡೆಯಲಿದೆ. ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿರುವ ಆಟಗಾರರು ​​ಲೆಜೆಂಡ್ಸ್ ಕ್ರಿಕೆಟ್ ಲೀಗ್​​​ ಮೂಲಕ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ.
ಈ ಟೂರ್ನಿಯು ಒಮನ್​ನ ಅಲ್​ ಅಮೆರತ್​ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ
‘ಇಂಡಿಯಾ ಮಹಾರಾಜ’ ಎಂಬ ಹೆಸರಿನೊಂದಿಗೆ ಭಾರತ ತಂಡ ಪಾಲ್ಗೊಳ್ಳುತ್ತಿದೆ ಇದರಲ್ಲಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್​, ಆಲ್​ರೌಂಡರ್​​ ಯುವರಾಜ್​​ ಸಿಂಗ್​ ಹಾಗೂ ಹರ್ಭಜನ್​ ಸಿಂಗ್​​ ಇದ್ದಾರೆ.
ಭಾರತ ಮಹಾರಾಜ ತಂಡ:
ವೀರೇಂದ್ರ ಸೆಹ್ವಾಗ್​, ಇರ್ಫಾನ್ ಪಠಾಣ್​, ಯೂಸುಫ್‌ ಪಠಾಣ್​, ಹರ್ಭಜನ್​ ಸಿಂಗ್​, ಯುವರಾಜ್​ ಸಿಂಗ್​, ಎಸ್​. ಬದ್ರಿನಾಥ್​, ಆರ್.​​ಪಿ.ಸಿಂಗ್​, ಪ್ರಗ್ಯಾನ್​ ಓಜಾ, ನಮನ್ ಓಜಾ, ಮನಪ್ರೀತ್ ಗೋನಿ, ಹೇಮಗ್​ ಬದಾನಿ, ವೇಣುಗೋಪಾಲ್​​ ರಾವ್​, ಮುನಾಫ್ ಪಟೇಲ್​, ಸಂಜಯ್​ ಬಂಗಾರ, ನಯನ್​ ಮೊಂಗ್ಯಾ, ಅಮೀತ್​​ ಭಂಡಾರಿ ಇರಲ್ಲಿದ್ದಾರೆ.
ಇನ್ನು ಪಾಕ್​ ಹಾಗೂ ಶ್ರೀಲಂಕಾ ಕ್ರಿಕೆಟ್‌ ಟೀಮ್ ಕೂಡ ಈ ಪಂದ್ಯದಲ್ಲಿದ್ದು, ಲೆಜೆಂಡ್​ಗಳಾದ ಶೋಯೆಬ್​ ಅಖ್ತರ್​, ಶಾಹಿದ್​ ಅಫ್ರಿದಿ, ಸನತ್​​ ಜಯಸೂರ್ಯ, ಮುತ್ತಯ್ಯ ಮುರಳೀಧರನ್​, ಕಮ್ರಾನ್​ ಅಕ್ಮಲ್​, ದಿಲ್ಸ್ಯಾನ್​, ಮಿಸ್ಬಾ ಉಲ್​ ಹಕ್​, ಮೊಹಮ್ಮದ್ ಹಫೀಜ್​, ಶೋಯೆಬ್​ ಮಲಿಕ್​​, ಮೊಹಮ್ಮದ್​​ ಯೂಸೂಫ್‌​ ಹಾಗೂ ಉಮರ್ ಗುಲ್​ ಮೊದಲಾದವರು ಆಡಲಿದ್ದಾರೆ.
ಈ ಲೀಗ್​ ಪಂದ್ಯ ಭಾರತ, ಏಷ್ಯಾ ಮತ್ತು ವಿಶ್ವ ಇತರೆ ತಂಡಗಳ ನಡುವೆ ನಡೆಯಲಿವೆ. ಬಾಲಿವುಡ್​ನ ಬಿಗ್‌ಬಿ ಅಮಿತಾಬ್​ ಬಚ್ಚನ್​​​ ಲೆಜೆಂಡ್ಸ್​​ ಲೀಗ್​​ನ ರಾಯಭಾರಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!