ಭಾರತ ರಕ್ಷಣಾ ಆಮದುದಾರರಿಂದ ರಕ್ಷಣಾ ರಫ್ತುದಾರರತ್ತ ಸಾಗುತ್ತಿದೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೇನೆಯಲ್ಲಿ ಆತ್ಮನಿರ್ಭರ ಭಾರತ ಈಗಿನ ಕಾಲಕ್ಕೆ ಅತ್ಯಂತ ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ನೌಕಾಪಡ ಸ್ವಾವಲಂಬನ್ ಸೆಮಿನಾರ್ ಆಯೋಜಿಸವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಮೋದಿ ಹೇಳಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ನೌಕಾ ಪಡೆ ಆಯೋಜಿಸಿದ ನೌಕಾ ಆವಿಷ್ಕಾರ ಮತ್ತು ಸ್ವದೇಶೀಕರಣದ ಸ್ವಾವಲಂಬನ್ ಸೆಮಿನಾರ್ ಉದ್ದೇಶಿ ಮೋದಿ ಮಾತನಾಡಿದರು.
ನೌಕಾ ಸೇನೆಯಲ್ಲಿ ಎರಡು ರಾಷ್ಟ್ರಗಳು ಅಥವಾ ಹೆಚ್ಚಿನ ರಾಷ್ಟ್ರಗಳು ಜಂಟಿ ಅಭ್ಯಾಸ ನಡೆಸುವುದು ಸಾಮಾನ್ಯವಾಗಿದೆ. ಇದೀಗ ನೌಕಾಪಡೆಯಲ್ಲಿ ಸ್ವಾವಲಂಬನೆ ಕೂಡ ಒಂದು ರೀತಿಯಲ್ಲಿ ಜಾಯಿಂಟ್ ಎಕ್ಸೈಸ್ ಆಗಿದೆ ಎಂದು ಮೋದಿ ಹೇಳಿದ್ದಾರೆ.
ಮುಂದಿನ ವರ್ಷ ಆಗಸ್ಟ್ 15ರೊಳಗೆ ನೌಕಾಪಡೆಗಾಗಿ 75 ದೇಶೀಯ ತಂತ್ರಜ್ಞಾನಗಳನ್ನ ರಚಿಸುವುದು ಮೊದಲ ಹೆಜ್ಜೆಯಾಗಿದೆ. ಇನ್ನು ನಾವು 100 ವರ್ಷಗಳ ಸ್ವಾತಂತ್ರ್ಯೋತ್ಸವ ಆಚರಿಸುವ ಹೊತ್ತಿಗೆ ಭಾರತದ ರಕ್ಷಣೆಯನ್ನ ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಗುರಿಯಾಗಿರಬೇಕು ಎಂದರು.
ಅತ್ಯಂತ ಸರಳವಾದ ಉತ್ಪನ್ನಗಳಿಗೆ ಸಹ ನಾವು ವಿದೇಶಗಳ ಮೇಲೆ ಅವಲಂಬಿತರಾಗುವ ಅಭ್ಯಾಸವನ್ನು ಬೆಳೆಸಿಕೊಂಡೆವು. ಮಾದಕ ವ್ಯಸನಿಗಳಂತೆಯೇ ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಿಗೆ ವ್ಯಸನಿಗಳಾಗಿದ್ದೆವು. ಆದ್ರೆ, ಈ ಮನಸ್ಥಿತಿಯನ್ನ ಬದಲಾಯಿಸಲು, ನಾವು 2014ರ ನಂತ್ರ ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಿದ್ದೇವೆ, ಹಿಂದಿನ ವಿಧಾನದಿಂದ ಕಲಿತ ನಂತ್ರ ‘ಸಬ್ಕಾ ಪ್ರಯಾಸ್’ ಸಹಾಯದಿಂದ ರಕ್ಷಣೆಯ ಹೊಸ ಪರಿಸರ ವ್ಯವಸ್ಥೆಯನ್ನ ರಚನೆಯಾಗಲಿದೆ’ ಎಂದು ಹೇಳಿದರು.
ನೀವು ನಿಮ್ಮ ಸ್ವಂತ ಮಗುವಿಗೆ ಪ್ರೀತಿ ಮತ್ತು ಗೌರವವನ್ನ ನೀಡದಿದ್ರೆ ಮತ್ತು ನಿಮ್ಮ ನೆರೆಹೊರೆಯವರಿಂದ ಅದನ್ನ ನಿರೀಕ್ಷಿಸದಿದ್ರೆ ಅದನ್ನು ಮಾಡಬಹುದೇ? ನಾವು ನಮ್ಮ ಉತ್ಪನ್ನಗಳಿಗೆ ಬೆಲೆ ಕೊಡದಿದ್ದರೆ, ಜಗತ್ತು ನಮ್ಮ ಮೇಲೆ ಹೂಡಿಕೆ ಮಾಡಬೇಕೆಂದು ನಾವು ಹೇಗೆ ನಿರೀಕ್ಷಿಸಬಹುದು? ದೇಶೀಯವಾಗಿ ಅಭಿವೃದ್ಧಿ ಹೊಂದಿದ ನಮ್ಮ ಬ್ರಹ್ಮೋಸ್ ಬಗ್ಗೆ ನಾವು ವಿಶ್ವಾಸ ತೋರಿಸಿದಾಗ, ಜಗತ್ತು ಸಹ ಮುಂದೆ ಬಂದಿತು ಎಂದರು.
ಕಳೆದ 4-5 ವರ್ಷಗಳ ಅಲ್ಪಾವಧಿಯಲ್ಲಿ, ನಮ್ಮ ರಕ್ಷಣಾ ಆಮದು ಸುಮಾರು 21% ರಷ್ಟು ಕಡಿಮೆಯಾಗಿದೆ. ನಾವು ರಕ್ಷಣಾ ಆಮದುದಾರರಾಗುವುದರಿಂದ ರಕ್ಷಣಾ ರಫ್ತುದಾರನಾಗಲು ಮುಂದೆ ಸಾಗುತ್ತಿದ್ದೇವೆ ಎಂದು ಹೇಳಿದರು.
ಅಜಾದಿ ಕಾ ಅಮೃತಮಹೋತ್ಸವ ಸಂದರ್ಭದಲ್ಲಿ ಈ ರೀತಿಯ ಸ್ವಾವಲಂಬನ್ ಬಹುದೊಡ್ಡ ಯೋಜನೆ ನೌಕಾಪಡೆ ಕೈಗೆತ್ತಿಕೊಂಡಿರುವುದು ಮತ್ತಷ್ಟು ಉತ್ತೇಜನ ನೀಡಲಿದೆ. ನಮ್ಮ ಸಮುದ್ರದ ಗಡಿ ರಕ್ಷಣೆ ಅತ್ಯಂತ ಸವಾಲಿನಿಂದ ಕೂಡಿದೆ. ಹೀಗಾಗಿ ನೌಕಾಪಡೆ ಸಮಯಕ್ಕೆ ತಕ್ಕಂತೆ ಅಧುನಿಕತೆ, ಅತ್ಯಾಧುನಿಕ ನೌಕೆಗಳೊಂದಿಗೆ ಮೇಲ್ದರ್ಜೆಗೇರಬೇಕಾದ ಅನಿವಾರ್ಯತೆ ಇದೆ ಎಂದು ಮೋದಿ ಹೇಳಿದ್ದಾರೆ. ಸ್ವಾವಲಂಬಿಯಿಂದ ಭಾರತ ಹೆಚ್ಚು ಶಕ್ತಿಯುತವಾಗಲಿದೆ. ಇದರಿಂದ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!