ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಪ್ರಾರಂಭವಾದ ಬ್ಯಾಡ್ಮಿಂಟನ್ ಇಂಡಿಯಾ ಓಪನ್ ಟೂರ್ನಿಯಲ್ಲಿ ಪಿ.ವಿ. ಸಿಂಧು ಹಾಗೂ ಶಟ್ಲರ್ ಅಶ್ಮಿತಾ ಚಾಲಿಹಾ ಅದ್ಭುತ ಆರಂಭ ನೀಡಿದ್ದಾರೆ.
ಮಹಿಳಾ ಸಿಂಗಲ್ಸ್ ಸುತ್ತಿನ ಪಂದ್ಯದಲ್ಲಿ ಅಶ್ಮಿತಾ ರಷ್ಯಾದ ಇವ್ಗೆನಿಯಾ ಕೊಸೆಕ್ಟ್‌ಯಾ ಅವರನ್ನು 24-22, 21-16 ಅಂತರದಲ್ಲಿ ಸೋಲಿಸಿ ಶುಭಾರಂಭ ಮಾಡಿದ್ದಾರೆ. ನಂತರದ ಜೋಡಿ ಪಂದ್ಯದಲ್ಲಿ ಪಿ.ವಿ.ಸಿಂಧು ಶ್ರೀಕೃಷ್ಣಪ್ರಿಯ ಕುದರವಳ್ಳಿ ವಿರುದ್ಧ 21-5,21-16 ಅಂತರಲ್ಲಿ ಗೆಲುವು ಸಾಧಿಸಿದ್ದಾರೆ.
ಇನ್ನುಳಿದಂತೆ ಪುರುಷರ ಸಿಂಗಲ್ಸ್ ನಲ್ಲಿ ಸಮೀರ್ ವರ್ಮ, ಕೆ. ಶ್ರೀಕಾಂತ್ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.