ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ.
ಹ್ಯಾಕರ‍್ಸ್‌ಗಳು ಖಾತೆಯ ಹೆಸರನ್ನು ಎಲೋನ್ ಮಸ್ಕ್ ಎಂದು ಬದಲಿಸಿದ್ದರು. ಹಾಗೇ ಗ್ರೇಟ್ ಜಾಬ್ ಎನ್ನುವ ಟ್ವೀಟ್ ಕೂಡ ಮಾಡಲಾಗಿತ್ತು. ಸ್ವಲ್ಪವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟರ್ ಖಾತೆಯ ಮೇಲೆ ಮತ್ತೆ ನಿಯಂತ್ರಣ ಹೊಂದಿದೆ.
ಹ್ಯಾಕರ‍್ಸ್ ಅಕೌಂಟ್‌ನಲ್ಲಿ ಕೆಲವು ಲಿಂಕ್‌ಗಳನ್ನು ಕೂಡ ಪೋಸ್ಟ್ ಮಾಡಿದ್ದರು. ಕೆಲ ಸಮಯದಲ್ಲೇ ಸಚಿವಾಲಯ ಅಕೌಂಟ್‌ನ್ನು ವಾಪಾಸ್ ಪಡೆದು ಪ್ರೊಫೈಲ್ ಹೆಸರು ಬದಲಿಸಿದೆ. ಹ್ಯಾಕರ‍್ಸ್‌ನ ಟ್ವೀಟ್‌ಗಳನ್ನು ಡಿಲೀಟ್ ಮಾಡಿದೆ.