Friday, December 8, 2023

Latest Posts

ICC WORLD CUP | ಮೋದಿ ಸ್ಟೇಡಿಯಂನಲ್ಲಿಂದು ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಏಕದಿನ ವಿಶ್ವಕಪ್ 2023ರ ಹೈವೋಲ್ಟೇಜ್ ಪಂದ್ಯಕ್ಕೆ ಇನ್ನೇನು ಕೆಲವೇ ಸಮಯ ಬಾಕಿಯಿದ್ದು, ಇಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದೆ.

ಇಂದು ಮಧ್ಯಾಹ್ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರೋಚಕ ಪಂದ್ಯ ನಡೆಯಲಿದ್ದು, ವಾರಗಳ ಹಿಂದೆಯೇ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಉಭಯ ತಂಡಗಳು ತಾವು ಆಡಿರುವ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿವೆ, ಹಾಗಾಗಿ ಈ ಪಂದ್ಯವನ್ನು ಗೆಲ್ಲುವ ತವಕ ಎರಡೂ ಪಂದ್ಯಕ್ಕಿದೆ. ಭಾರತಕ್ಕೆ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಯಾಗಿದ್ದು, ಪಂದ್ಯದ ಆಸಕ್ತಿ ಭಿಮಾನಿಗಳಲ್ಲಿ ಹೆಚ್ಚಾಗಿದೆ.

ಡೆಂಗ್ಯೂನಿಂದ ಚೇತರಿಸಿಕೊಂಡಿರುವ ಶುಭ್‌ಮನ್ ಗಿಲ್ ಕೂಡ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಶುಭ್‌ಮನ್ ಫೀಲ್ಡ್‌ಗೆ ಇಳಿದರೆ ಇಶಾನ್ ಕಿಶನ್ ಹೊರಕೂರಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!