Wednesday, November 29, 2023

Latest Posts

ICC WORLD CUP | ನಾಳೆ ಭಾರತ-ಪಾಕ್ ಪಂದ್ಯ, ದುಬಾರಿಯಾಯ್ತು ಟಿಕೆಟ್ ಬೆಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿಯ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ನಾಳೆ ನಡೆಯಲಿದೆ. ಈ ಪಂದ್ಯ ವೀಕ್ಷಿಸಲು ಸಾಕಷ್ಟು ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದು, ಟಿಕೆಟ್ ಎಷ್ಟು ದುಡ್ಡಾದ್ರೂ ಪರವಾಗಿಲ್ಲ ಅಂತಿದ್ದಾರೆ.

ಹೌದು, ನಾಳೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಟಿಕೆಟ್ 22 ಸಾವಿರ ರೂಪಾಯಿಗೆ ಸೇಲ್ ಆಗಿದೆ.

ಎರಡು ಸಾವಿರ ರೂಪಾಯಿಗೆ ಟಿಕೆಟ್ ಪಡೆದು 22 ಸಾವಿರ ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ, ಕಡೆಕ್ಷಣದಲ್ಲಿ ಟಿಕೆಟ್ ಬೇಕೆಂದವರು ಬ್ಲಾಕ್‌ನಲ್ಲಿ ಟಿಕೆಟ್ ಪಡೆದಿದ್ದಾರೆ ಎನ್ನಲಾಗಿದೆ.

ವಾರದ ಹಿಂದೆಯೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ನಿಮಿಷಗಳಲ್ಲಿ ಬುಕ್ಕಿಂಗ್ ಸೋಲ್ಡ್ ಔಟ್ ಆಗಿತ್ತು. ಹೀಗಾಗಿ ಸಾಕಷ್ಟು ಅಭಿಮಾನಿಗಳಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬೇಸ್ ಲೆವೆಲ್ ಟಿಕೆಟ್ 2,200ಕ್ಕೆ ಹಾಗೂ ಲಾಂಜ್ ಮತ್ತು ಉನ್ನತ ಮಟ್ಟದ ಟಿಕೆಟ್‌ಗಳು 15,000 ರೂಪಾಯಿಗೆ ಮಾರಾಟವಾಗಿವೆ. ಈ ಬೆಲೆ ಕೊಡಲು ಅಭಿಮಾನಿಗಳು ತಯಾರಿದ್ದಾರೆ ಆದರೆ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!