ಶತ್ರು ಎಂದರೇನು ತಿಳಿಯದ ಮಕ್ಕಳನ್ನು ಭೀಕರವಾಗಿ ಕೊಂದರು: ಫೋಟೊ ಹಂಚಿಕೊಂಡ ನೆತನ್ಯಾಹು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶತ್ರು ಎನ್ನುವ ಪದಕ್ಕೆ ಅರ್ಥವೇ ಗೊತ್ತಿಲ್ಲದ ಕಂದಮ್ಮಗಳನ್ನು ಕ್ಷಣಮಾತ್ರವೂ ಯೋಚಿಸಿದೆ ಸುಟ್ಟು ಕೊಂದ ಇವರು ಉಗ್ರರಲ್ಲ, ರಾಕ್ಷಸರು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

Latest News Today: Breaking News and Top Headlines from India, Politics,  Bengaluru, Entertainment, Business and Sportsಇವರು ಹಮಾಸ್ ಅಲ್ಲ, ಐಸಿಸ್ ಉಗ್ರರು, ಯುದ್ಧ ಇದೀಗ ಅಪಾಯಕಾರಿ ತಿರುವು ಪಡೆದಿದೆ, ಎಂಥ ಕಟುಕನಿಗೇ ಆದರೂ ಮಕ್ಕಳನ್ನು ಕೊಲ್ಲಲು ಮನಸ್ಸು ಹೇಗೆ ಬರುತ್ತದೆ? ಅವರ ಬಂದೂಕು ಒಂದು ಕ್ಷಣವೂ ಅಲುಗಾಡಲಿಲ್ಲವೆ? ಮಕ್ಕಳ ಮೃತದೇಹಗಳನ್ನು ನೋಡಿ ಅತೀವ ದುಃಖವಾಗುತ್ತಿದೆ ಎಂದಿದ್ದಾರೆ.

ಹಮಾಸ್ ಉಗ್ರರ ಕ್ರೂರತೆಗೆ ಬಲಿಯಾದ ಕಂದಮ್ಮಗಳ ಮೃತದೇಹದ ಫೋಟೊಗಳನ್ನು ಹಂಚಿಕೊಂಡಿದ್ದು, ಜಗತ್ತಿಗೆ ಅವರ ಕ್ರೌರ್ಯದ ಪರಿಚಯ ಮಾಡಿಸಿದ್ದಾರೆ. ಕೊಲೆ ಮಾಡಿ ಸುಟ್ಟು ಹಾಕಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!