ಹೊಸದಿಗಂತ ಡಿಜಿಟಲ್ ಡೆಸ್ಕ್
ʼಹಿಂದೂ ಎಂಬ ಪದವು ಪರ್ಷಿಯನ್ ಪದವಾಗಿದ್ದು, ಅದು ಭಾರತದಲ್ಲಿ ಹುಟ್ಟಿಲ್ಲʼ ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ ಹೇಳಿಕೆಗೆ ಕರ್ನಾಟಕ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉಸ್ತುವಾರಿ ಅರುಣ್ ಸಿಂಗ್ ಕಿಡಿಕಾರಿದ್ದು, ಕಾಂಗ್ರೆಸ್ ದೇಶದ ಪುರಾತನ ಸಂಸ್ಕೃತಿಯನ್ನು ಅವಹೇಳನ ಮಾಡಿದೆ ಎಂದು ಮಂಗಳವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಂಗ್, “ಕಾಂಗ್ರೆಸ್ ಯಾವಾಗಲೂ ನಮ್ಮ ಪ್ರಾಚೀನ ಸಂಸ್ಕೃತಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತದೆ. ಸತೀಶ್ ಜಾರಕಿಹೊಳಿ ಅವರು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದೆ. ಜನರು ತಕ್ಕ ಉತ್ತರ ನೀಡುತ್ತಾರೆ” ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಸೋಮವಾರ “ಹಿಂದೂ” ಎಂಬ ಪದವು ಪರ್ಷಿಯನ್ ಪದವಾಗಿದ್ದು, “ಭಯಾನಕ” ಎಂಬ ಅರ್ಥವನ್ನು ನೀಡುತ್ತದೆ ಮತ್ತು ಜನರು ಅದನ್ನು ಏಕೆ ಉನ್ನತ ಸ್ಥಾನದಲ್ಲಿ ಇರಿಸುತ್ತಾರೆ ಎಂದು ಪ್ರಶ್ನಿಸಿದ್ದರು.
“ಹಿಂದೂ ಪದವು ಎಲ್ಲಿಂದ ಬಂದಿದೆ? ಇದು ಪರ್ಷಿಯಾದಿಂದ ಬಂದಿದೆ.. ಹಾಗಾದರೆ, ಭಾರತದೊಂದಿಗೆ ಅದರ ಸಂಬಂಧವೇನು? ‘ಹಿಂದೂ’ ಪದ ನಮ್ಮದಾಗುವುದು ಹೇಗೆ? ವಾಟ್ಸಾಪ್ ಮತ್ತು ವಿಕಿಪೀಡಿಯಾದಲ್ಲಿ ಪರಿಶೀಲಿಸಿ, ಪದವು ನಮ್ಮದಲ್ಲವೇ ಅಲ್ಲ. ಅದರ ಅರ್ಥ ಭಯಾನಕ ಎಂದಾಗಿದೆ”ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ