ಮುಂದುವರಿದ ದೆಹಲಿ ಮಾಲಿನ್ಯ: ಎಕ್ಯೂಐನಲ್ಲಿ ಅತ್ಯಂತ ಕಳಪೆ ಮಟ್ಟ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾಯು ಗುಣಮಟ್ಟ ಮತ್ತು ಹವಾಮಾನ ಇಲಾಖೆಯ ಪ್ರಕಾರ, ಮಂಗಳವಾರ ಬೆಳಿಗ್ಗೆ ಒಟ್ಟಾರೆ ವಾಯು ಗುಣಮಟ್ಟ 321ರ ಸೂಚ್ಯಂಕದೊಂದಿಗೆ (AQI) ರಾಷ್ಟ್ರೀಯ ರಾಜಧಾನಿಯಲ್ಲಿ ‘ಅತ್ಯಂತ ಕಳಪೆ’ಯಾಗಿ ತೋರಿಸಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಸಹ ವಿಷಪೂರಿತ ಗಾಳಿಯಿಂದ ತುಂಬಿದೆ.

ನೋಯ್ಡಾವು  AQI 354ರಷ್ಟು ಗಾಳಿಯ ಗುಣಮಟ್ಟ, ಗುರುಗ್ರಾಮ್‌ AQI 326 ರಷ್ಟಿದೆ. ರಾಷ್ಟ್ರ ರಾಜಧಾನಿಯ ಎಲ್ಲಾ ಪ್ರಮುಖ ಮೇಲ್ವಿಚಾರಣಾ ಕೇಂದ್ರಗಳಲ್ಲಿ ದಾಖಲಾದ AQI ಕೂಡ ‘ಅತ್ಯಂತ ಕಳಪೆ’ ವಿಭಾಗದಲ್ಲಿದೆ.

0 ರಿಂದ 100 ರವರೆಗಿನ ವಾಯು ಗುಣಮಟ್ಟ ಸೂಚ್ಯಂಕವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ, ಆದರೆ 100 ರಿಂದ 200 ರವರೆಗೆ ಮಧ್ಯಮ, 200 ರಿಂದ 300 ರವರೆಗೆ ಅದು ಕಳಪೆಯಾಗಿರುತ್ತದೆ ಮತ್ತು 300 ರಿಂದ 400 ರವರೆಗೆ ಇದು ಅತ್ಯಂತ ಕಳಪೆ ಮತ್ತು 400 ರಿಂದ 500 ಅಥವಾ ಅದಕ್ಕಿಂತ ತೀವ್ರವೆಂದು ಪರಿಗಣಿಸಲಾಗಿದೆ.

ವಾಯು ಗುಣಮಟ್ಟ ಸೂಚ್ಯಂಕದಲ್ಲಿನ ಸುಧಾರಣೆಯ ನಂತರ, ದೆಹಲಿ ಸರ್ಕಾರ ಸೋಮವಾರ ರಾಷ್ಟ್ರ ರಾಜಧಾನಿಗೆ ಟ್ರಕ್‌ಗಳ ಪ್ರವೇಶದ ಮೇಲಿನ ನಿಷೇಧ ಸೇರಿದಂತೆ ಈ ಹಿಂದೆ ವಿಧಿಸಿದ್ದ ವಿವಿಧ ನಿಷೇಧಗಳನ್ನು ತೆಗೆದುಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!