ಸ್ಥಳೀಯ ಬೆಲೆ ಏರಿಕೆಗೆ ಸರ್ಕಾರ ಬ್ರೇಕ್‌ , ಗೋಧಿ ರಫ್ತು ತಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಸ್ಥಳೀಯ ಬೆಲೆ ಏರಿಕೆಯನ್ನು ತಡೆಗಟ್ಟಲು ಭಾರತವು ಕ್ರಮ ಕೈಗೊಂಡಿದ್ದು ಗೋಧಿ ರಪ್ತುಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಪ್ರಪಂಚದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದನೆ ಹೊಂದಿರುವ ಭಾರತದಲ್ಲಿ ಕಳೆದ ತಿಂಗಳಿನಲ್ಲಿ ಗೋಧಿ ಬೆಲೆಯು ದಶಕಗಳಲ್ಲೇ ಅತಿ ಹೆಚ್ಚು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಈ ಕುರಿತು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ವು ಅಧಿಸೂಚನೆ ಹೊರಡಿಸಿದ್ದು “ಗೋಧಿಯ ರಫ್ತು ನೀತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ಸಾಲದ ಪತ್ರ ಹೊಂದಿರುವ ಸಾಗಣೆಗಳು ಮತ್ತು ಇತರ ದೇಶಗಳ ಕೋರಿಕೆಯ ಮೇರೆಗೆ ಅವರ ಆಹಾರ ಭದ್ರತೆಯನ್ನು ಪೂರೈಸಲು ಮಾತ್ರ ರಫ್ತು ಮಾಡಲು ಅನುಮತಿಸಲಾಗುವುದು” ಎಂದು ತಿಳಿಸಲಾಗಿದೆ. ಇದರೊಂದಿಗೆ ಈರುಳ್ಳಿ ಬೀಜಗಳ ರಪ್ತನ್ನೂ ಕೂಡ ತಡೆಹಿಡಿಯಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!