ಹೆಚ್ಚಾದ ಟೊಮೆಟೊ ಜ್ವರದ ಭೀತಿ, ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣಾ ತಂಡ ನಿಯೋಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳ ರಾಜ್ಯದಲ್ಲಿ ಮಕ್ಕಳ ಪಾಲಿಗೆ  ‘ಟೊಮೆಟೊ ಜ್ವರ’  ಯುಮಪಾಷವಾಗಿದೆ. ಆ ಭಯಾನಕ ವೈರಸ್‌ ಬೇರೆ ರಾಜ್ಯಗಳಿಗೂ ವ್ಯಾಪಿಸುತ್ತಿದೆ. ಜ್ವರ ಹರಡುವುದನ್ನು ತಡೆಯಲು ಕೇರಳ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯದ ಗಮನಕ್ಕೆ ತಂದಿದೆ. ಕೇರಳದಲ್ಲಿ ಟೊಮೆಟೊ ಜ್ವರದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಕೇರಳದ ಗಡಿ ಹಂಚಿಕೊಂಡಿರುವ ತಮಿಳುನಾಡಿನ ಎಲ್ಲಾ ಚೆಕ್ ಪೋಸ್ಟ್‌ಗಳ ಮೇಲೆ ಸರ್ಕಾರ ಕಣ್ಗಾವಲಿರಿಸಿದೆ.

ದದ್ದು ಮತ್ತು ಗುಳ್ಳೆಗಳಿರುವ ಮಕ್ಕಳು ರಾಜ್ಯಕ್ಕೆ ಬರದಂತೆ ತಡೆಯಲು ಪ್ರತಿ ಚೆಕ್ ಪೋಸ್ಟ್‌ನಲ್ಲಿ ಮೂರು ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಮಿಳುನಾಡು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶೇಷ ಕಣ್ಗಾವಲು ತಂಡವನ್ನು ಪಾಲಕ್ಕಾಡ್ ಜಿಲ್ಲೆಯ ವಳಯಾರ್ ಚೆಕ್ ಪೋಸ್ಟ್, ತಿರುವನಂತಪುರಂನಿಂದ ಕಲಿಯಕಾವಲಿ ಮತ್ತು ಥೇಣಿ ಚೆಕ್ ಪೋಸ್ಟ್‌ಗಳಲ್ಲಿ ಸ್ಥಾಪಿಸಲಾಗಿದೆ. ಐದು ವರ್ಷದೊಳಗಿನ ಮಕ್ಕಳನ್ನು ಕೂಲಂಕಷವಾಗಿ ಪರೀಕ್ಷಿಸಲು ತಮಿಳುನಾಡು ವೈದ್ಯಕೀಯ ಇಲಾಖೆಯ ಅಡಿಯಲ್ಲಿ ವೈದ್ಯಕೀಯ, ಪೊಲೀಸ್ ಮತ್ತು ಕಂದಾಯ ತಂಡಗಳನ್ನು ಗಡಿಯಲ್ಲಿ ನಿಯೋಜಿಸಲಾಗಿದೆ.

ಕೇರಳದ ಹಲವು ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಟೊಮೆಟೊ ಜ್ವರ ಪ್ರಕರಣಗಳು ವರದಿಯಾಗುತ್ತಿವೆ. ಟೊಮೆಟೊ ಜ್ವರ ಅಪರೂಪದ ವೈರಲ್ ಕಾಯಿಲೆಯಾಗಿದೆ. ಮಕ್ಕಳಲ್ಲಿ ದದ್ದು, ಗುಳ್ಳೆಗಳ ಹರಡುವಿಕೆ ಈ ರೋಗದ ಲಕ್ಷಣವಾಗಿದೆ. ಜ್ವರ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಕ್ಕಳು ಹೊರಗೆ ಓಡಾಡದಂತೆ, ಆಗಾಗ ಬಿಸಿನೀರು ಮತ್ತು ಪೌಷ್ಟಿಕಾಂಶ ಊಟ ಕೊಡುವಂತೆ ರಾಜ್ಯ ಆರೋಗ್ಯ ಇಲಾಖೆ ಪೋಷಕರಿಗೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!