CWG 2022 | ಬಾರ್ಬಡೋಸ್‌ ವಿರುದ್ಧ ಭರ್ಜರಿ ಗೆಲುವು: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕಾಮನ್‌ವೆಲ್ತ್‌ ಗೇಮ್ಸ್‌ನ  ಕ್ರಿಕೆಟ್‌ನಲ್ಲಿ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಬಾರ್ಬಡೋಸ್‌ ತಂಡದ ವಿರುದ್ಧ 100 ರನ್‌ಗಳ ಭರ್ಜರಿ ಗೆಲುವು ಪಡೆದ ಭಾರತ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಭಾರತ 20 ಓವರ್‌ ಗಳಲ್ಲಿ 162 ರನ್‌ ಕಲೆಹಾಕಿತು. ಆರಂಬಿಕ ಆಟಗಾರ್ತಿ  ಸ್ಮೃತಿ ಮದನಾ(5) ಬೇಗನೆ ಔಟಾದ ಬಳಿಕ ಶಫಾಲಿ ವರ್ಮಾ ಕೂಡ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ಕೇವಲ 26 ಎಸೆತಗಳಲ್ಲಿ 43 ರನ್ ಗಳಿಸಿದರು. ಆ ಬಳಿಕ ಬಂದ ನಾಯಕ ಹರ್ಮನ್‌ಪ್ರೀತ್ ಕೌರ್ ಸೊನ್ನೆ ಸುತ್ತಿದರು. ಭಾರತವು ನಾಲ್ಕು ವಿಕೆಟ್‌ಗೆ 92 ರನ್‌ ಗಳಿಸಿದ್ದ ವೇಳೆ ಜೊತೆಯಾದ ಜೆಮಿಮಾ ರೋಡ್ರಿಗೇಸ್‌ (56) ಮತ್ತು ದೀಪ್ತಿ ಶರ್ಮಾ (34) ಐದನೇ ವಿಕೆಟ್‌ಗೆ ಅಜೇಯ 70 ರನ್‌ಗಳನ್ನು ಸೇರಿಸುವ ಮೂಲಕ ಭಾರತವನ್ನು 160 ರನ್‌ಗಳ ಗಡಿ ದಾಟಿಸಿದರು.
163 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾರ್ಬಡೋಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ ಕೇವಲ 62 ರನ್‌ ಗಳಿಸಲಷ್ಟೇ ಸೀಮಿತವಾಯಿತು. ಭಾರತದ ಪರ ಮಾರಕ ಬೌಲಿಂಗ್‌ ಪ್ರದರ್ಶಿಸಿದ ವೇಗಿ ರೇಣುಕಾ ಟಾಕೂರ್‌ 4 ಓವರ್‌ ಗಳಲ್ಲಿ 10 ರನ್ ಗಳಿಗೆ 4 ವಿಕೆಟ್‌ ಉರುಳಿಸಿ ಬಾರ್ಬಡೋಸ್‌ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಈ ಭರ್ಜರಿ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ ಹಂತವನ್ನು ಪ್ರವೇಶಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!