ಅತ್ತ ಇಸ್ರೇಲ್ ಮೇಲಿನ ದಾಳಿಗೆ ಮರುಗಿದ ಭಾರತ: ಇತ್ತ ಪ್ಯಾಲೆಸ್ತಿನ್‌ಗೆ ನಮ್ಮ ಬೆಂಬಲ ಎಂದ ಕಾಂಗ್ರೆಸ್!

ಹೊಸದಿಂತ ಡಿಜಿಟಲ್‌ ಡೆಸ್ಕ್:‌

ಇಸ್ರೇಲ್ ಮೇಲೆ ಪ್ಯಾಲೆಸ್ತಿನ್ ಬೆಂಬಲಿತ ಹಮಾಸ್ ಉಗ್ರರು ಏಕಾಏಕಿ 5000 ರಾಕೆಟ್ ದಾಳಿ ನಡೆಸಿದ್ದು, ಬಳಿಕ ಗಾಜಾ ಸ್ಟ್ರಿಪ್‌ನಿಂದ ವಾಯು ಮಾರ್ಗ, ಜಲಮಾರ್ಗ ಹಾಗೂ ರಸ್ತೆ ಮಾರ್ಗದ ಮೂಲಕ ಇಸ್ರೇಲ್‌ಗೆ ನುಗ್ಗಿದ ಹಮಾಸ್ ಉಗ್ರರು ಬಾಂಬ್, ಗುಂಡಿನ ದಾಳಿ ನಡೆಸಿದ್ದಾರೆ.

ಈ ಘಟನೆ ಬೆನ್ನಲ್ಲೇ ಭಾರತ ಸರ್ಕಾರ, ಉಗ್ರ ದಾಳಿಯನ್ನು ಖಂಡಿಸಿ ಇಸ್ರೇಲ್‌ಗೆ ಬೆಂಬಲ ಸೂಚಿಸಿತ್ತು. ಆದರೆ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸರ್ಕಾರ ನಡೆಸಿದ ಪ್ರತಿದಾಳಿಗೆ ಅಸಮಧಾನ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ಪಕ್ಷ ಪ್ಯಾಲೆಸ್ತಿನ್‌ಗೆ ಬೆಂಬಲ ಸೂಚಿಸಿದೆ.

ಪ್ಯಾಲೆಸ್ತಿನ್ ಬೆಂಬಲಿತ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಗೆ ಇಡೀ ವಿಶ್ವವೇ ಖಂಡಿಸುತ್ತಿದೆ. ಆದರೆ ಹಮಾಸ್ ದಾಳಿಯನ್ನು ಪ್ಯಾಲೆಸ್ತಿನ್‌ನಲ್ಲಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ.

ಆದ್ರೆ ಇತ್ತ ಭಾರತದಲ್ಲಿ ಕಾಂಗ್ರೆಸ್ , ಪ್ಯಾಲೆಸ್ತಿನ್ ಹಕ್ಕುಗಳ, ಅವರ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ದಾಳಿ ಪ್ರತಿದಾಳಿಗಳು ಪರಿಹಾರವಲ್ಲ. ತಕ್ಷಣವೇ ದಾಳಿ ನಿಲ್ಲಿಸಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ಹೇಳಿಕೊಂಡಿದೆ.

ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಎಲ್ಲಾ ಸಮಸ್ಯೆಗಳನ್ನು ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಪ್ಯಾಲೆಸ್ತಿನ್ ಅಮಾಯಕರ ಜೀವಹಾನಿ ಎಂದಿಗೂ ಉತ್ತರವಲ್ಲ ಕಾಂಗ್ರೆಸ್ ಹಿರಿಯ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ.

ಕಾಂಗ್ರೆಸ್ ಸಭೆಯಲ್ಲಿ ಪ್ಯಾಲೆಸ್ತಿನ್ ನಾಗರೀಕರ ಹಕ್ಕುಗಳ ಸಂರಕ್ಷಣೆಗೆ ಕಾಂಗ್ರೆಸ್ ಆದ್ಯತೆ ನೀಡಲಿದೆ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!