ಮಾಲ್ಡೀವ್ಸ್’ನಿಂದ 51 ಸೇನಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡ ಭಾರತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಮಾಲ್ದೀವ್ಸ್‌ ನಲಿದ್ದ 51 ಸೇನಾ ಸಿಬ್ಬಂದಿಗಳನ್ನು ಭಾರತ ವಾಪಸು ಕರೆಯಿಸಿಕೊಂಡಿದೆ. ಮೇ 10ರೊಳಗೆ ವಾಪಸು ಕರೆಯಿಸಿಕೊಳ್ಳಬೇಕು ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ಗಡುವು ನಿಗದಿಪಡಿಸಿದ್ದರು.

ಅದ್ರಂತೆ ಭಾರತ ಸರ್ಕಾರವು ಎರಡು ತಂಡಗಳಲ್ಲಿ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ ಎಂದು ಮಾಲ್ದೀವ್ಸ್‌ ಸರ್ಕಾರ ತಿಳಿಸಿತ್ತು.

ಆದಾಗ್ಯೂ, ನಿಖರವಾದ ಅಂಕಿ-ಅಂಶವನ್ನ ಈ ಹಿಂದೆ ಬಹಿರಂಗಪಡಿಸಲಾಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ರಾಷ್ಟ್ರಪತಿ ಕಚೇರಿಯ ಮುಖ್ಯ ವಕ್ತಾರೆ ಹೀನಾ ವಲೀದ್, ಈವರೆಗೆ ಒಟ್ಟು 51 ಭಾರತೀಯ ಸೈನಿಕರನ್ನ ಸ್ವದೇಶಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ಮೇ 10 ರೊಳಗೆ ಮಾಲ್ದೀವ್ಸ್‌ ನಿಂದ ದೇಶದ ಎಲ್ಲಾ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲಾಗುವುದು. ಪ್ರಸ್ತುತ, ಎರಡು ಪ್ಲಾಟ್ಫಾರ್ಮ್ಗಳಲ್ಲಿ ಬೀಡುಬಿಟ್ಟಿದ್ದ 51 ಸೈನಿಕರನ್ನು ವಾಪಸ್ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!