ದಿನಭವಿಷ್ಯ: ಸಂತೋಷ, ಆರೋಗ್ಯ, ನೆಮ್ಮದಿ ಇವು ಇಂದು ನಿಮ್ಮ ದಿನಚರಿಯ ಅಂಗಗಳು..

ಮೇಷ
ಎಲ್ಲಾ ಕಾರ್‍ಯಗಳು ಇಂದು ಸುಗಮವಾಗಿ ಸಂಪನ್ನಗೊಳ್ಳುವವು. ವಿರೋಧಿಗಳನ್ನು ಮನವೊಲಿಸಲು ಸಫಲರಾಗುವಿರಿ.ಮಾನಸಿಕ ನೆಮ್ಮದಿ.

ವೃಷಭ
ಅಸಹನೆ ಹೆಚ್ಚುವ ಪ್ರಸಂಗ ಸಂಭವಿಸಬಹುದು. ಎಲ್ಲರ ಮೇಲೆ ರೇಗುವಿರಿ.ಆರೋಗ್ಯದ ಮೇಲೂ ಪರಿಣಾಮ ಉಂಟಾದೀತು.

ಮಿಥುನ
ನಿಮ್ಮ ಮಾನಸಿಕ ಸ್ಥೈರ್ಯ ಸಮಸ್ಯೆ ಎದುರಿಸಲು ನೆರವಾಗುವುದು. ಸುಲಭಕ್ಕೆ ಬಗ್ಗುವವರು ನೀವಲ್ಲ. ಅಂತಿಮ ಗೆಲುವು ನಿಮ್ಮದೇ.

ಕಟಕ
ಹಲವಾರು ಬದ್ಧತೆಗಳನ್ನು ಈಡೇರಿಸಬೇಕಾದ ಒತ್ತಡ. ಒಂದೊಂದಾಗಿ ಅದನ್ನು ನೆರವೇರಿಸಿ. ಹೆಚ್ಚು ಚಿಂತೆ ಪಡುವ ಅಗತ್ಯವಿಲ್ಲ. ಸಹನೆ ಇರಲಿ.

ಸಿಂಹ
ಸಂತೋಷ, ಆರೋಗ್ಯ, ನೆಮ್ಮದಿ ಇವು ಇಂದು ನಿಮ್ಮ ದಿನಚರಿಯ ಅಂಗಗಳು. ಹಾಗಾಗಿ ಒತ್ತಡ, ಕಷ್ಟಗಳು
ಬಾಧಿಸಲಾರವು. ಕೌಟುಂಬಿಕ ಸಹಕಾರ.

ಕನ್ಯಾ
ಉತ್ಸಾಹದ ಮನಸ್ಥಿತಿ. ಹಲವು ಕಾರ್‍ಯಗಳನ್ನು ಏಕಕಾಲದಲ್ಲಿ ಮಾಡಿ ಮುಗಿಸುವ ಹುಮ್ಮಸ್ಸು. ಇದಕ್ಕೆ ಕಾರಣ ನಿಮಗೆ ಪೂರಕ ಬೆಳವಣಿಗೆ ಉಂಟಾಗಿರುವುದು.

ತುಲಾ
ಸಾಮಾಜಿಕ ಮತ್ತು ಆರ್ಥಿಕ ಹೊಣೆಗಾರಿಕೆ ಹೆಚ್ಚುವುದು. ಆತುರದ ಕ್ರಮಕ್ಕೆ ಮುಂದಾಗಬೇಡಿ. ದಣಿದ ಮನಸ್ಸಿಗೂ ದೇಹಕ್ಕೂ ವಿಶ್ರಾಂತಿ ಬೇಕು.

ವೃಶ್ಚಿಕ
ಬಿಡುವಿಲ್ಲದ ಕೆಲಸದಿಂದ ಇಂದು ತುಸು ವಿರಾಮ ದೊರಕುವುದು. ಬಂಧುಮಿತ್ರರ ಜತೆ ಸಲ್ಲಾಪ. ಆರ್ಥಿಕ ಲಾಭ. ವಸ್ತು ಖರೀದಿಯ
ಸಾಧ್ಯತೆ ಇದೆ.

ಧನು
ಆರ್ಥಿಕ ಮತ್ತು ಖಾಸಗಿ ಜೀವನದಲ್ಲಿ ಪೂರಕ ಬೆಳವಣಿಗೆ. ಆರೋಗ್ಯ ಸಮಸ್ಯೆ ತುಸು ಪರಿಹಾರ ಕಾಣುವುದು. ಆಪ್ತೇಷ್ಟರ ಬೆಂಬಲ , ಸಹಕಾರ ಪಡೆಯುವಿರಿ.

ಮಕರ
ವಿಧೇಯರಾಗುವುದು ಒಳ್ಳೆಯದು. ಆದರೆ ಎಲ್ಲರ ತಾಳಕ್ಕೆ ಕುಣಿಯಬೇಡಿ. ಕೆಲ ವಿಷಯಗಳಲ್ಲಿ ಆತ್ಮಾಭಿಮಾನ ಇಟ್ಟುಕೊಳ್ಳಿ.

ಕುಂಭ
ಹೊಸ ವ್ಯವಹಾರಕ್ಕೆ ಆರ್ಥಿಕ ಸಹಕಾರ ಒದಗುವುದು. ಆಪ್ತರಿಂದ ಬೆಂಬಲ. ಪ್ರೇಮಿಗಳಿಗೆ ಅಡ್ಡಿಗಳು.  ವಿದ್ಯಾರ್ಥಿಗಳಿಗೆ ಅಧ್ಯಯನದ ಒತ್ತಡ.

ಮೀನ
ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಸಿಗುವುದು. ಖಾಸಗಿ ಬದುಕಿನಲ್ಲಿ ನೀವು ನಿರೀಕ್ಷಿಸದ ಸಮಸ್ಯೆ ಉದ್ಭವಿಸಬಹುದು. ಸಹನೆ ಕಾಯ್ದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!