ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿರುವುದು ದೊಡ್ಡ ಅವಕಾಶ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಅಧ್ಯಕ್ಷ ಸ್ಥಾನವನ್ನು ಭಾರತ ಸ್ವೀಕರಿಸಿರುವುದು ಒಂದು ದೊಡ್ಡ ಅವಕಾಶ ಎಂಬ ಮಾತನ್ನು ಹೇಳಿದರು. ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇದು ಚಳಿಗಾಲದ ಅಧಿವೇಶನದ ಮೊದಲ ದಿನವಾಗಿದೆ. ಈ ಅಧಿವೇಶನವು ಮಹತ್ವದ್ದಾಗಿದೆ ಏಕೆಂದರೆ, ಸ್ವಾತಂತ್ರ್ಯದ 75 ವರ್ಷಗಳು ಆಗಸ್ಟ್ 15 ರಂದು ಪೂರ್ಣಗೊಂಡಿವೆ ಮತ್ತು ನಾವು ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಮುಂದುವರಿಯುತ್ತಿದ್ದೇವೆ. ಭಾರತವು ಜಿ20 ಅಧ್ಯಕ್ಷರಾಗುವ ಅವಕಾಶವನ್ನು ಪಡೆದಿರುವ ಸಮಯದಲ್ಲಿ ನಾವು ಮತ್ತೆ ಭೇಟಿಯಾಗುತ್ತಿದ್ದೇವೆ ಎಂದರು.

ಭಾರತವು ಜಾಗತಿಕ ಸಮುದಾಯದಲ್ಲಿ ಹೆಸರು ಮಾಡಿದ ರೀತಿ, ಭಾರತದೊಂದಿಗಿನ ನಿರೀಕ್ಷೆಗಳನ್ನು ಹೆಚ್ಚಿಸಿದ ರೀತಿ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತವು ತನ್ನ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿರುವ ರೀತಿ, ಇಂತಹ ಸಮಯದಲ್ಲಿ ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ಪಡೆದಿರುವುದು ದೊಡ್ಡ ಅವಕಾಶವಲ್ಲದೇ ಮತ್ತೇನು ಎಂದರು.

ಈ ಜಿ 20 ಶೃಂಗಸಭೆಯು ರಾಜತಾಂತ್ರಿಕ ಕಾರ್ಯಕ್ರಮ ಮಾತ್ರವಲ್ಲ, ಇದು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುವ ಅವಕಾಶವೂ ಆಗಿದೆ. ಅಂತಹ ದೊಡ್ಡ ದೇಶ, ಪ್ರಜಾಪ್ರಭುತ್ವದ ತಾಯಿ, ಅಂತಹ ವೈವಿಧ್ಯತೆ, ಅಂತಹ ಸಾಮರ್ಥ್ಯ – ಇದು ಭಾರತವನ್ನು ತಿಳಿದುಕೊಳ್ಳಲು ಜಗತ್ತಿಗೆ ಒಂದು ಅವಕಾಶ ಮತ್ತು ಭಾರತವು ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಸಿಕ್ಕ ದಾರಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!