ಕಳೆದ 24 ಗಂಟೆಗಳಲ್ಲಿ 2,124 ಹೊಸ ಕೋವಿಡ್‌ ಕೇಸ್‌ ಪತ್ತೆ: 77 ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 2,124 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಮಂಗಳವಾರಕ್ಕೆ ಹೋಲಿಸಿದರೆ ಇದು ತುಸು ಏರಿಕೆಯಾಗಿದೆ. ಇನ್ನು ಸಾವಿನ ಪ್ರಕರಣಗಳಲ್ಲೂ ಏರಿಕೆಯಾಗಿದ್ದು 77 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಒಟ್ಟೂ 14,971 ಸಕ್ರಿಯ ಪ್ರಕಣಗಳಿದು 0.49% ದಷ್ಟು ಪಾಸಿಟಿವಿಟಿ ದರ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 1,977 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಚೇತರಿಕಾ ದರವು 98.75% ದಷ್ಟಿದೆ.

ದೇಶದಾದ್ಯಂತ ಒಟ್ಟೂ 193.53 ಕೋಟಿ ಲಸಿಕೆ ವಿತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!