ಹೊಸದಿಗಂತ ಡಿಜಿಟಲ್ ಡೆಸ್ಕ್
ಜಿಲ್ಲೆಯೊಂದರ ಮರುನಾಮಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಆಂಧ್ರಪ್ರದೇಶದ ಅಮಲಾಪುರಂ ನಗರದಲ್ಲಿ ಸಾರಿಗೆ ಸಚಿವ ಪಿನಿಪೆ ವಿಶ್ವರೂಪ್ ಹಾಗೂ ಆಡಳಿತಾರೂಢ ವೈಎಸ್‌ಆರ್‌ಸಿಪಿ ಶಾಸಕ ಪಿ.ಸತೀಶ್ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಆಂಧ್ರದಲ್ಲಿ ಹೊಸದಾಗಿ ರಚಿಸಲಾದ ಕೋನಸೀಮಾ ಜಿಲ್ಲೆಯನ್ನು ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಜನರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದಾಗ, ಪ್ರತಿಭಟನಾಕಾರರು ಕಲ್ಲು ತೂರಾಟದ ಮೂಲಕ ಪ್ರತಿಕ್ರಿಯಿಸಿದರು. ಸಾವಿರಾರು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಸಂಕೀರ್ಣಕ್ಕೆ ನುಗ್ಗಲು ಯತ್ನಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತು.
#WATCH | People staged a protest in Andhra Pradesh over renaming the Konaseema district.
Severals resorted to stone-pelting and set fire to vehicles targeting police, 20 police personal injured. pic.twitter.com/3pHqcB0PBC
— ANI (@ANI) May 24, 2022
ಆಕ್ರೋಶ ಭರಿತ ಜನ ಪೊಲೀಸ್ ವಾಹನಗಳು ಮತ್ತು ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಎಂದು ಕೋನಸೀಮಾ ಎಸ್ಪಿ ಕೆ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಘಟನೆಯಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ಹಿಂಸಾಚಾರವನ್ನು ನಾವು ಸಂಯಮದಿಂದ ಹತೋಟಿಗೆ ತರುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
#WATCH | MLA Ponnada Satish's house was set on fire by protestors in Konaseema district in Andhra Pradesh today, the protests were opposing the naming of the district as Dr BR Ambedkar Konaseema district pic.twitter.com/XzJskKqhz3
— ANI (@ANI) May 24, 2022
ಸಂಘರ್ಷದ ವೇಳೆ ಪ್ರತಿಭಟನಾಕಾರರು ಸಾರಿಗೆ ಸಚಿವ ಪಿನಿಪೆ ವಿಶ್ವರೂಪು ಅವರ ಮನೆಗೆ ಬೆಂಕಿ ಹಚ್ಚಿದರು. ಆ ವೇಳೆ ಸಚಿವರು ಮತ್ತು ಅವರ ಕುಟುಂಬ ಸದಸ್ಯರನ್ನು ಪೊಲೀಸರು ಸುರಕ್ಷಿತವಾಗಿ ಸ್ಥಳಾಂತರಿಸಿದರು.
ಪೂರ್ವ ಗೋದಾವರಿ ಜಿಲ್ಲೆಯಿಂದ ಕೆತ್ತಿದ ಕೋನಸೀಮಾವು ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಏಪ್ರಿಲ್‌ನಲ್ಲಿ ಘೋಷಿಸಿದ 13 ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ. ಕೋನಸೀಮಾ ನಗರದ ಅಮಲಾಪುರಂ ಎಸ್‌ಸಿ-ಮೀಸಲು ಸಂಸದೀಯ ಕ್ಷೇತ್ರವಾಗಿದೆ. ಈ ಜಿಲ್ಲೆಯನ್ನು ಡಾ.ಬಿ.ಆರ್ ಅಂಬೇಡ್ಕರ್ ಕೋನಸೀಮ ಜಿಲ್ಲೆ ಎಂದು ನಾಮಕರಣ ಮಾಡುವುದನ್ನು ವಿರೋಧಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ನಗರದ ಸಾಂಪ್ರದಾಯಿಕ ಹೆಸರನ್ನು ಉಳಿಸಿಕೊಳ್ಳುವಂತೆ ಕೋನಸೀಮಾ ಪರಿರಕ್ಷಣಾ ಸಮಿತಿ, ಕೋನಸೀಮಾ ಸಾಧನಾ ಸಮಿತಿ ಮತ್ತು ಕೋನಸೀಮಾ ಉದ್ಯಮ ಸಮಿತಿಯಂತಹ ಗುಂಪುಗಳ ನೇತೃತ್ವದಲ್ಲಿ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ವಿರೋಧ ಪಕ್ಷ ತೆಲುಗು ದೇಶಂ ಪಕ್ಷ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಸಾರಿಗೆ ಸಚಿವ ವಿಶ್ವರೂಪ್ ಆರೋಪಿಸಿದ್ದಾರೆ.
“ಜಿಲ್ಲೆಯ ಹೆಚ್ಚಿನ ಜನಸಂಖ್ಯೆಯು ಎಸ್‌ಸಿ ಸಮುದಾಯಕ್ಕೆ ಸೇರಿರುವುದರಿಂದ ಜನರ ವಿನಂತಿಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ಕೋನಸೀಮಾವನ್ನು ಅಂಬೇಡ್ಕರ್ ಜಿಲ್ಲೆ ಎಂದು ಮರುನಾಮಕರಣ ಮಾಡಿದೆ. ಆದರೆ ಟಿಡಿಪಿ ಗೊಂದಲವನ್ನುಂಟುಮಾಡಲು ಈ ಪ್ರತಿಭಟನೆಗಳನ್ನು ಪ್ರಚೋದಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.