Thursday, December 8, 2022

Latest Posts

ಭಾರತೀಯ ವಲಸಿಗರ ಕುರಿತಾಗಿ ಯುಕೆ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ಹೇಳಿಕೆಗೆ ಭಾರತ ಪ್ರತಿಕ್ರಿಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಮೈಗ್ರೇಷನ್ ಆಂಡ್ ಮೊಬಿಲಿಟಿ ʼಪಾಲುದಾರಿಕೆʼಯಲ್ಲಿ ಭಾರತ ಉತ್ತಮವಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಯುಕೆ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ಅವರ ಹೇಳಿಕೆಗೆ ಭಾರತ ಪ್ರತಿಕ್ರಿಯಿಸಿದೆ. ವಲಸೆ ಮತ್ತು ಚಲನಶೀಲ ಪಾಲುದಾರಿಕೆ (MMP) ಅಡಿಯಲ್ಲಿ ಭಾರತವು ತನಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ಮೇಲೆ ಕ್ರಮವನ್ನು ಪ್ರಾರಂಭಿಸಿದೆ ಎಂದು ಯುಕೆಯಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬ್ರೇವರ್‌ಮನ್, ಭಾರತೀಯರನ್ನು ಬ್ರಿಟನ್ ನಲ್ಲಿ ತಮ್ಮ ವೀಸಾ ಅವಧಿ ಮೀರಿದ “ಜನರ ದೊಡ್ಡ ಗುಂಪು” ಎಂದು ಬ್ರಾಂಡ್ ಮಾಡಿದ್ದರು.
ವಲಸೆ ಮತ್ತು ಚಲನಶೀಲತೆಯ ಅಡಿಯಲ್ಲಿನ ನಮ್ಮ ವ್ಯಾಪಕ ಚರ್ಚೆಗಳ ಭಾಗವಾಗಿ, ಯುಕೆಯಲ್ಲಿ ತಮ್ಮ ವೀಸಾ ಅವಧಿಯನ್ನು ಮೀರಿದ ಭಾರತೀಯ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ಭಾರತ ಸರ್ಕಾರವು ಇಂಗ್ಲೆಂಡ್ ಸರ್ಕಾರದೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ. ವಲಸೆ ಮತ್ತು ಮೊಬಿಲಿಟಿ ಪ್ರೋಟೋಕಾಲ್‌ನ ಭಾಗವಾಗಿ ಕ್ರಮಗಳನ್ನು ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಹೈಕಮಿಷನ್‌ ಹೇಳಿದೆ.
ಭಾರತೀಯ ಮೂಲದ ಬ್ರಿಟಿಷ್ ಸಚಿವೆ ಸುಯೆಲ್ಲಾ ಬ್ರೆವರ್‌ಮನ್ ಅವರು ಬ್ರಿಟಿಷ್ ವಾರಪತ್ರಿಕೆ ‘ದಿ ಸ್ಪೆಕ್ಟೇಟರ್’ಗೆ ನೀಡಿದ ಸಂದರ್ಶನದಲ್ಲಿ  ಈ ಹೇಳಿಕೆ ನೀಡಿದ್ದರು. ಭಾರತದೊಂದಿಗೆ ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಬಗ್ಗೆ ತನಗೆ “ಕಳವಳವಿದೆ” ಎಂದು ಅವರು ಹೇಳಿದ್ದರು. ಯುಕೆಗೆ ವಲಸೆಯನ್ನು ಹೆಚ್ಚಿಸುವ ಪ್ರಸ್ತಾವಿತ ಒಪ್ಪಂದದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು.
“ಭಾರತದೊಂದಿಗೆ ಮುಕ್ತ ಗಡಿ ವಲಸೆ ನೀತಿಯನ್ನು ಹೊಂದುವ ಬಗ್ಗೆ ನನಗೆ ಕಳವಳವಿದೆ. ಏಕೆಂದರೆ ಜನರು ಬ್ರೆಕ್ಸಿಟ್‌ನೊಂದಿಗೆ ಮತ ಚಲಾಯಿಸಿದ್ದಾರೆಂದು ನಾನು ಭಾವಿಸುವುದಿಲ್ಲ” ಎಂದು ಬ್ರೇವರ್‌ಮನ್ ‘ದಿ ಸ್ಪೆಕ್ಟೇಟರ್’ ಜೊತೆ ಮಾತನಾಡುತ್ತ ಅಭಿಪ್ರಾಯಪಟ್ಟಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!