May 21, 2026
Thursday, May 21, 2026
spot_img

ಮಧ್ಯಪ್ರಾಚ್ಯದ ಸಂಘರ್ಷದ ನಡುವೆಯೂ ತೈಲ ಪೂರೈಕೆಯಲ್ಲಿ ಭಾರತ ಸುರಕ್ಷಿತ: ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆಯೂ ಭಾರತದಲ್ಲಿ ತೈಲ ಪೂರೈಕೆ ಸುರಕ್ಷಿತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೋಕ ಸಭೆಯಲ್ಲಿ ಇಂದು ಮಾತನಾಡಿದ ಅವರು, ಅಮೆರಿಕ-ಇಸ್ರೇಲ್, ಇರಾನ್ ನಡುವಿನ ಕದನದ ನಡುವೆ ಯಾವುದೇ ರೀತಿಯಲ್ಲೂ ದೇಶದ ಜನತೆಗೆ ಪೆಟ್ರೋಲ್, ಡೀಸೆಲ್, ಹಾಗೂ ಎಲ್ ಪಿ ಜಿ ಅಭಾವ ಆಗದಂತೆ ಸರಕಾರ ನೋಡಿಕೊಳ್ಳುತ್ತಿದೆ. ಈ ಹಿಂದೆ ನಾವು 27 ದೇಶಗಳಿಂದ ಇಂಧನ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಕಾಲ ಬದಲಾಗಿದ್ದು, ಕಳೆದ 11 ವರ್ಷಗಳಿಂದ 41 ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಈ ಮೂಲಕ ಪ್ರಸುತ್ತ ನಮ್ಮಲ್ಲಿ 53 ಲಕ್ಷ ಮೆಟ್ರಿಕ್ ಇಂಧನ ನಿಕ್ಷೇಪಗಳಿದ್ದು, ಮುಂದಿನ ದಿನಗಳ್ಲಲಿ 65 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ನಿಕ್ಷೇಪ ಹೊಂದಲು ಕೆಲಸ ನಿರಂತರವಾಗಿ ಸಾಗುತ್ತಿದೆ ಎಂದು ತಿಳಿಸಿದರು.

ಭಾರತವು ಅತಿ ಹೆಚ್ಚು ಇಂಧನ ಆಮದು ಮಾಡಿಕೊಳ್ಳಲು ಹಾರ್ಮುಜ್ ಜಲಸಂಧಿಯನ್ನು ಅವಲಂಬಿಸಿದೆ. ಆದರೆ ಈ ಯುದ್ಧದಿಂದಾಗಿ ಅಲ್ಪ ಕಷ್ಟವಾದರೂ ಸವಾಲುಗಳನ್ನು ಎದುರಿಸುವ ಮೂಲಕ ನಮ್ಮ ಸರಕಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ,ಎಲ್ ಪಿಜಿ ಪೂರೈಕೆ ಸುಗಮವಾಗಿ ಸಾಗುವಂತೆ ನಿರಂತರ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು.

ಈ ಸಂಘರ್ಷ ಶುರುವಾದ ದಿನದಿಂದ ವಿವಿಧ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ನಾನು ಎರಡು ಬಾರಿ ಕರೆ ಮಾಡಿ ಮಾತನಾಡಿದ್ದೇನೆ. ಪ್ರತಿಯೊಬ್ಬರು ಭಾರತೀಯರ ಸುರಕ್ಷತೆಯ ಭರವಸೆಯನ್ನು ನೀಡಿದ್ದಾರ . ಹೀಗಾಗಿ ನಾವು ಯಾವ ರೀತಿ ಕೊರೋನಾ ಸಮಯದಲ್ಲಿ ಸವಾಲುಗಳನ್ನು ಎದುರಿಸಿದ್ದೇವೆ ಹಾಗೆಯೇ ಈ ಕ್ಷಣ ಒಗ್ಗಟ್ಟಿನಿಂದ ಎಲ್ಲಾ ಸವಾಲುಗಳನ್ನು ಎದುರಿಸಲು ಸಿದ್ಧರಾಗಿಬೇಕು ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !