ಪಾಕ್ ಗೆ ಮತ್ತೊಂದು ಶಾಕ್: ಚೀನಾ ನಿರ್ಮಿತ ಪಾಕ್‌ನ JF-17 ವಿಮಾನವನ್ನು ಹೊಡೆದು ಹಾಕಿದ ಭಾರತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಿಡ್‌ನೈಟ್‌ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ JF-17 ಯುದ್ಧ ವಿಮಾನವನ್ನು ಭಾರತ ಹೊಡೆದು ಹಾಕಿದೆ.

ಚೀನಾ ನಿರ್ಮಿತ ಜೆಎಫ್‌-17 ಯುದ್ಧ ವಿಮಾನ ಭಾರತದ ದಾಳಿಯನ್ನು ತಡೆಯಲು ಬಂದಿತ್ತು. ಈ ಸಂದರ್ಭದಲ್ಲಿ ಭಾರತ ಕ್ಷಿಪಣಿಯನ್ನು ಹಾರಿಸಿ ಬೀಳಿಸಿದೆ ಎಂದು ವರದಿಯಾಗಿದೆ. ಈ ವಿಚಾರದ ಬಗ್ಗೆ ಇಲ್ಲಿಯವರೆಗೆ ಭಾರತ ಸೇನೆ ಅಧಿಕೃತವಾಗಿ ತಿಳಿಸಿಲ್ಲ.

ಜೆಎಫ್‌ 17 ಚೀನಾ ನಿರ್ಮಿತ ಯುದ್ಧ ವಿಮಾನವಾಗಿದೆ. ಪಾಕಿಸ್ತಾನದ ಬಳಿ 150 ಜೆಎಫ್‌ 17 ವಿಮಾನಗಳಿವೆ. ಈ ಹಿಂದೆ ಅಭಿನಂದನ್‌ ವರ್ಧಮಾನ್‌ ಅವರು ಅಮೆರಿಕದ ಎಫ್‌ 16 ಯುದ್ಧ ವಿಮಾನ ಹೊಡೆದು ಹಾಕಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!