ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು, ಗೌರವಿಸಬೇಕು: ‘ಕೈ’ ನಾಯಕನ ಪ್ರಚೋದನಕಾರಿ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನವೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ನಮ್ಮ ಸರ್ಕಾರ ಅವರನ್ನು ಪ್ರಚೋದಿಸಿದರೆ ಭಾರತವನ್ನು ನಾಶ ಮಾಡಬಹುದು. ಹಾಗಾಗಿ ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು, ಇಲ್ಲದಿದ್ದರೆ ದೇಶವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನವನ್ನು ಹೊಗಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಮಾಜಿ ಕಾಂಗ್ರೆಸ್ ಸಚಿವರು ಸಂದರ್ಶನವೊಂದರಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಸಾಮೂಹಿಕ ಬಾಂಬ್‌ಗಳಿರುವಂತೆಯೇ ಪಾಕಿಸ್ತಾನದಲ್ಲೂ ಸಾಮೂಹಿಕ ಬಾಂಬ್‌ಗಳಿವೆ.

ನಾವು ಅವರನ್ನು ಗೌರವಿಸಿದರೆ ಅವರು ನಮ್ಮನ್ನು ಗೌರವಿಸುತ್ತಾರೆ. ನಾವು ಅವರನ್ನು ಕೆರಳಿಸಿದರೆ, ನಮ್ಮ ವಿರುದ್ಧ ಅಣುಬಾಂಬ್ ಪ್ರಯೋಗಿಸುವ ಬಗ್ಗೆಯೂ ಯೋಚಿಸುತ್ತಾರೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!