ಬೆಂಗಳೂರಲ್ಲಿ ಭಾರಿ ಮಳೆ: 17 ವಿಮಾನಗಳು ಚೆನ್ನೈಗೆ ಡೈವರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಗುರುವಾರ ಸಂಜೆ ಭಾರಿ ಮಳೆಯಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಸುರಿದ ಪರಿಣಾಮ ಟರ್ಮಿನಲ್ 2ರ ಮೇಲ್ಛಾವಣಿಯಲ್ಲಿ ಸೋರಿಕೆಯಾಗಿದ್ದು, ವಿಮಾನ ನಿಲ್ದಾಣದ ಒಳಗೆ ನೀರು ನುಗ್ಗಿದೆ. ಮಂದ ಬೆಳಕು ಮತ್ತು ಬಿರುಗಾಳಿ ಮಳೆಯಿಂದ ವಿಮಾನಗಳ ಲ್ಯಾಂಡಿಂಗ್​ ಮಾಡಲು ಸಾಧ್ಯವಾಗದ ಹಿನ್ನೆಲೆ 17 ವಿಮಾನಗಳನ್ನು ಚೆನ್ನೈನತ್ತ ಡೈವರ್ಟ್ ಮಾಡಬೇಕಾಯಿತು.

ಭಾರಿ ಗಾಳಿ ಮತ್ತು ಮಳೆ ಪರಿಣಾಮ ರಾತ್ರಿ 9.35 ರಿಂದ 10.29ರ ನಡುವೆ ವಿಮಾನಗಳನ್ನು ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಬೇಕಾಯಿತು ಎಂದು ವಿಮಾನ ನಿಲ್ದಾಣ ಮಾಹಿತಿ ನೀಡಿದೆ.

ಭಾರೀ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿ 1 ಗಂಟೆಗಳ ಕಾಲ ವಿಮಾನಗಳ ಕಾಲ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಬೆಂಗಳೂರಿಗೆ ಬರಬೇಕಿದ್ದ 17 ವಿಮಾನಗಳನ್ನು ಚೆನ್ನೈನತ್ತ ಡೈವರ್ಟ್ ಮಾಡಬೇಕಾಯಿತು. ಮಳೆ ನಿಂತ ಬಳಿಕ ಚೆನ್ನೈನಿಂದ ಬೆಂಗಳೂರಿಗೆ ವಿಮಾನಗಳು ಬಂದು ಲ್ಯಾಂಡ್ ಆದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!