August 13, 2026
Thursday, August 13, 2026
spot_img

ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ಭಾರತ: ಒಂದೇ ಏಟಿಗೆ ಎರಡೆರಡು ವಿಶ್ವದಾಖಲೆ ಧೂಳೀಪಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಿಂಬಾಬ್ವೆ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 219 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಅವರ ಸ್ಪೋಟಕ ಅರ್ಧಶತಕಗಳು ಈ ಸವಾಲಿನ ಮೊತ್ತಕ್ಕೆ ಪ್ರಮುಖ ಕಾರಣವಾದವು.

200+ ರನ್ ಗಳಿಕೆಯಲ್ಲಿ ಟೀಮ್ ಇಂಡಿಯಾ ನಂ.1

ಈ ಪಂದ್ಯದಲ್ಲಿ 200ರ ಗಡಿ ದಾಟುವ ಮೂಲಕ ಭಾರತ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಚುಟುಕು ಫಾರ್ಮ್ಯಾಟ್‌ನಲ್ಲಿ ಅತ್ಯಂತ ಹೆಚ್ಚು ಬಾರಿ (52 ಬಾರಿ) 200ಕ್ಕೂ ಅಧಿಕ ರನ್ ಬಾರಿಸಿದ ವಿಶ್ವದ ಮೊದಲ ತಂಡವಾಗಿ ಟೀಮ್ ಇಂಡಿಯಾ ಹೊರಹೊಮ್ಮಿದೆ.

ಆರ್‌ಸಿಬಿಗೆ ಎರಡನೇ ಸ್ಥಾನ

ಈ ಪಟ್ಟಿಯಲ್ಲಿ 46 ಬಾರಿ 200 ಪ್ಲಸ್ ರನ್ ಬಾರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎರಡನೇ ಸ್ಥಾನದಲ್ಲಿದ್ದರೆ, ಸೋಮರ್‌ಸೆಟ್ ಕೌಂಟಿ ತಂಡ 44 ಬಾರಿ ಈ ಸಾಧನೆ ಮಾಡಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಕ್ಯಾಲೆಂಡರ್ ವರ್ಷದ ಐತಿಹಾಸಿಕ ಸಾಧನೆ

ಇಷ್ಟೇ ಅಲ್ಲದೆ, 2026ರ ಕ್ಯಾಲೆಂಡರ್ ವರ್ಷದಲ್ಲಿ ಬರೋಬ್ಬರಿ 9ನೇ ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿದ ಭಾರತ, ತಾನೇ 2024ರಲ್ಲಿ ನಿರ್ಮಿಸಿದ್ದ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !