ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ದಾಳಿಯಿಂದ ತತ್ತರಿಸಿದ ಉಕ್ರೇನ್ಗೆ ಭಾರತ ಮಾನವೀಯ ದೃಷ್ಟಿಯಿಂದ ಪ್ರಮುಖ ಔಷಧಗಳು ಹಾಗೂ ಅಗತ್ಯವಸ್ತುಗಳನ್ನು ರವಾನಿಸಿದೆ.
ಉಕ್ರೇನ್ನ ನೆರೆರಾಷ್ಟ್ರ ಪೋಲೆಂಡ್ ಮೂಲಕ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಭಾರತ ನಿರ್ಧರಿಸಿದೆ. ಈ ಮೂಲಕ ನೆರವಿನ ಹಸ್ತ ಚಾಚಿದೆ.
ಉಕ್ರೇನ್ ಈಗಾಗಲೇ ಪ್ರಮುಖ ದೇಶಗಳಿಂದ ಮಾನವೀಯ ನೆರವು ಕೇಳಿದ್ದು, ಭಾರತದ ಕೂಡ ನೆರವು ನೀಡುವ ಭರವಸೆ ನೀಡಿತ್ತು. ಇದೇ ವಿಷಯವಾಗಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು.
ಕಳೆದ ಏಳು ದಿನಗಳಿಂದ ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆದಿದ್ದು, ಪ್ರಮುಖ ಎಲ್ಲ ನಗರಗಳ ಮೇಲೆ ನಿರಂತರ ಬಾಂಬ್, ಕ್ಷಿಪಣಿ ದಾಳಿ ನಡೆಸುತ್ತಿರುವ ಕಾರಣ ಸಾವಿರಾರು ಜನರು ಈಗಾಗಲೇ ತಮ್ಮ ಪ್ರಾಣ ಕಳೆದುಕೊಂಡಿದ್ದು, ಅಷ್ಟೇ ಪ್ರಮಾಣದಲ್ಲಿ ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ