ಸೌರಶಕ್ತಿಯಲ್ಲಿ ವಿಕ್ರಮ ಮೆರೆದ ಭಾರತ: 3 ವರ್ಷಗಳಲ್ಲಿ 91% ಹೆಚ್ಚಿದೆ ಸಾಮರ್ಥ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯನ್ನು ಹೆಚ್ಚಿಸುವತ್ತ ಭಾರತವು ವ್ಯಾಪಕವಾಗಿ ಪ್ರಯತ್ನಿಸುತ್ತಿದ್ದು ಇದರ ಭಾಗವಾಗಿ ಭಾರತದಲ್ಲಿ ಸೌರ ಶಕ್ತಿ ಸಾಮರ್ಥ್ಯವು ಮಾರ್ಚ್ 2019 ರಲ್ಲಿ 28,180 ಮೆಗಾವ್ಯಾಟ್‌ಗಳಿಂದ 2021-22 ರ ಅಂತ್ಯಕ್ಕೆ 53,996 ಮೆಗಾವ್ಯಾಟ್‌ಗಳಿಗೆ ಹೆಚ್ಚಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ಸಚಿವ ಆರ್‌ಕೆ ಸಿಂಗ್ ಸಂಸತ್ತಿಗೆ ತಿಳಿಸಿದರು. ಈ ಮಾಹಿತಿಯ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ, ದೇಶದಲ್ಲಿ ಸೌರ ಸಾಮರ್ಥ್ಯವು ಸುಮಾರು 91 ಪ್ರತಿಶತದಷ್ಟು ಹೆಚ್ಚಾಗಿದೆ.

ಭಾರತದ ಸೌರಶಕ್ತಿ ಉತ್ಪಾದನೆಯು 2019-20ರಲ್ಲಿ 34,627 ಮೆಗಾವ್ಯಾಟ್‌, 2020-21ರಲ್ಲಿ 40,085 ಮೆಗಾವ್ಯಾಟ್‌ ಮತ್ತು 2021-22 ರ ಅಂತ್ಯದಲ್ಲಿ 53,996 ಮೆಗಾ ವ್ಯಾಟ್‌ ಗಳಷ್ಟಾಗಿದ್ದು ವರ್ಷದಿಂದ ವರ್ಷಕ್ಕೆ ಭಾರತದ ಸೌರಶಕ್ತಿ ಉತ್ಪಾದನೆಯು ಹೆಚ್ಚಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದಲ್ಲದೆ, ದೇಶಾದ್ಯಂತ ಸೌರ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರವು ಗುರಿಯನ್ನು ಹೊಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ” CoP-26 ನಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರ ಘೋಷಣೆಯಂತೆ 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನಗಳಿಂದ ಅರ್ಥಾತ್‌ ನವೀಕರಿಸಬಹುದಾದ ಇಂಧನ ಮೂಲಗಳಿಂದ 500 ಗಿಗಾವ್ಯಾಟ್‌ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ” ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!