ಮುಂದಿನ 8 ತಿಂಗಳಲ್ಲಿ ಎಲ್ಲ ಪ್ರಜೆಗಳಿಗೆ ಲಸಿಕೆ ನೀಡುವ ಮೂಲಕ ಭಾರತ ಸಾಧನೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಮಾರ್ಚ್ ತಿಂಗಳ ದೇಶದ್ಯಾಂತ 12-15 ವರ್ಷದ ಮಕ್ಕಳಿಗೂ ಸಹ ಲಸಿಕೀಕರಣ ಆರಂಭವಾಗುತ್ತದೆ. ಮುಂದಿನ ಎಂಟು ತಿಂಗಳಲ್ಲಿ ದೇಶದ ಎಲ್ಲ ಪ್ರಜೆಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡಿ ಬೃಹತ್‌ ಸಾಧನೆ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿ ಮಂಗಳವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಕೇಶ್ವಾಪೂರದ ಪಾತಿಮಾ ಪ್ರೌಢ ಶಾಲೆ ಸಹಯೋಗದಲ್ಲಿ 12-15 ವರ್ಷದ ಮಕ್ಕಳ ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಇಲ್ಲಿಯ ವರೆಗೆ ೧೫೮ ಕೋಟಿ ಡೋಸ್ ಲಸಿಕೆ ನಿಡಲಾಗಿದೆ. ಅಂದಾಜು 66 ಕೋಟಿ ಹೆಚ್ಚು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಭಾರತ ದೇಶ ಬೇರೆ ದೇಶ ಹೋಲಿಸಿದರೆ 10 ಪಟ್ಟು ಹೆಚ್ಚು ಲಸಿಕೆ ನೀಡಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಜ. 3 ರಿಂದ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಪ್ರಾರಂಭಿಸಿದ್ದು. ಇಲ್ಲಿಯ ವರೆಗೆ ದೇಶದಲ್ಲಿ 3.31 ಕೋಟಿಗೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಿ ಯಶಸ್ವಿಯಾಗಿದ್ದೇವೆ ಎಂದರು.
ಅದೇ ರೀತಿ ಕೊರೋನಾ ಸದಿಗ್ಧ ಸಮಯದಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಉಚಿತ ಪಡಿತರ ನೀಡಿದ ಹೆಗ್ಗಳಿಕೆ ದೇಶ ಪಾತ್ರವಾಗಿದೆ. ಇಲ್ಲಿಯ ವರೆಗೆ ಮೂರ ಲಕ್ಷ ಕೋಟಿ ರೂ. ಉಚಿತ ಪಡಿತರ ಅಕ್ಕಿ ಜನಸಾಮಾನ್ಯರ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಅತೀ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ. ಇದಕ್ಕೆ ಮೂಲ ಕಾರಣ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಕಾರ್ಯಕರ್ತ ಶ್ರಮ ಹೆಚ್ಚಾಗಿದೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!