ಚೀನಾವನ್ನು ಹಣಿಯಲು ಪೂರ್ವ ಲಡಾಖ್‌ನಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪೂರ್ವ ಲಡಾಖ್‌ನಲ್ಲಿ ಚೀನೀ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರತಿಯಾಗಿ, ಭಾರತವು ಶೀಘ್ರದಲ್ಲೇ ನ್ಯೋಮಾದಲ್ಲಿ ಹೊಸ ಏರ್‌ಫೀಲ್ಡ್ ನಿರ್ಮಾಣವನ್ನು ಪ್ರಾರಂಭಿಸಲಿದೆ.

“ಚೀನಾ ಗಡಿಯಿಂದ 50 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿ ಏರ್‌ಫೀಲ್ಡ್ ನಿರ್ಮಾಣದಿಂದಾಗಿ ಈ ಪ್ರದೇಶದಲ್ಲಿ ಯುದ್ಧ ಮತ್ತು ಪ್ರಮುಖ ಸಾರಿಗೆ ವಿಮಾನ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ” ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

“ಸೇವೆಗಾಗಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಲಿರುವ ಏರ್‌ಫೀಲ್ಡ್‌ನಿಂದ ಭಾರತೀಯ ವಾಯುಪಡೆಯು ತ್ವರಿತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ” ಎಂದು ಮೂಲಗಳು ತಿಳಿಸಿವೆ.

2020 ರಲ್ಲಿ ಚೀನಾದ ಆಕ್ರಮಣವು ಪ್ರಾರಂಭವಾದಾಗಿನಿಂದ Nyoma ದಲ್ಲಿ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ (ALG) ನಿರ್ಮಿಸಲಾಗಿದ್ದು ಇಲ್ಲಿ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳು ಕಾರ್ಯನಿರತವಾಗಿದೆ. Nyoma ALG ಇದು ಭಾರತ ಮತ್ತು ಚೀನಾ ನಡುವಿನ ನೈಜ ನಿಯಂತ್ರಣ ರೇಖೆಗೆ (LAC) ಸಮೀಪವಿರುವ ವಾಯುನೆಲೆಯಾಗಿರುವುದರಿಂದ ಆಯಕಟ್ಟಿನ ದೃಷ್ಟಿಯಿಂದ ಪ್ರಾಮುಖ್ಯತೆ ವಹಿಸಿದೆ. ಪೂರ್ವ ಲಡಾಖ್ ವಾಯುನೆಲೆಯು ಪ್ರದೇಶದಲ್ಲಿ ಸೈನಿಕರು ಮತ್ತು ವಸ್ತುಗಳ ವೇಗದ ರವಾನೆಗೆ ಇದು ಸಹಾಯಕವಾಗಲಿದೆ.

ಪ್ರಸ್ತುತ ಭಾರತೀಯ ವಾಯುಪಡೆಯ (ಐಎಎಫ್) ಚಿನೂಕ್ ಮತ್ತು ಅಪಾಚೆ ಹೆಲಿಕಾಪ್ಟರ್‌ಗಳು ಚೀನಾ ಗಡಿಯಲ್ಲಿ ನಿಯೋಜಿಸಲಾದ ಸೈನಿಕರಿಗೆ ಸಹಾಯ ಮಾಡಲು ಈ ನೆಲೆಯಲ್ಲಿ ತಡೆರಹಿತವಾಗಿ ಕಾರ್ಯನಿರ್ವಹಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!