ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ : 1 ಕಪ್
ಎಣ್ಣೆ – 2 ಟೀಸ್ಪೂನ್
ಕರಿಬೇವು – ಸ್ವಲ್ಪ
ಸಾಸಿವೆ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಕಡಲೆಬೇಳೆ – 1 ಟೀಸ್ಪೂನ್
ಉದ್ದಿನಬೇಳೆ – 1 ಟೀಸ್ಪೂನ್
ಮೆಣಸಿನಕಾಯಿ – 2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಈರುಳ್ಳಿ – ಒಂದು
ಕಡಲೆಬೀಜ-ಅರ್ಧ ಕಪ್
ನಿಂಬೆ – 1
ಉಪ್ಪು – ಸಾಕಷ್ಟು
ಮಾಡುವ ವಿಧಾನ:
ಮೊದಲು ಸಬ್ಬಕ್ಕಿಯನ್ನು ನೀರಿನಿಂದ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಒಲೆಯನ್ನು ಹೊತ್ತಿಸಿ ಬಾಣಲೆ ಇಟ್ಟು ಎಣ್ಣೆ ಹಾಕಿ
ಅದರಲ್ಲಿ ನೆನೆಸಿದ ಸಬ್ಬಕ್ಕಿ ಹಾಕಿ ಅದು ಸಿಡಿಯುವವರೆಗೆ ಇದ್ದು, ಬಳಿಕ ತೆಗೆದಿಡಿ. ಈಗ ಸಾಸಿವೆ, ಜೀರಿಗೆ, ಕಡಲೇಬೇಲೆ, ಉದ್ದಿನಬೇಳೆ, ಕಡಲೆಬೀಜ ಹಾಕಿ ಉರಿಯಿರಿ. ಬಳಿಕ ಹಸಿಮೆಣಸಿನಕಾಯಿ, ಈರುಳ್ಳಿ ಕರಿಬೇವು ಹಾಕಿ ಸ್ವಲ್ಪ ಹೊತ್ತು ಬಾಡಿಸಿ ಈಗ ಪಕ್ಕಕ್ಕೆ ಇಟ್ಟಿರುವ ಸಬ್ಬಕ್ಕಿ ಉಪ್ಪು ಹಾಕಿ ತಕ್ಷಣ ಸ್ಟವ್ ಆಫ್ ಮಾಡಿ. ಇದಾದ ನಂತರ ಇದಕ್ಕೆ ನಿಂಬೆರಸ ಮತ್ತು ಸ್ವಲ್ಪ ಹಸಿ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿದರೆ ತುಂಬಾ ರುಚಿಯಾಗಿರುತ್ತದೆ.