2023 ರಲ್ಲಿ ಭಾರತವು ಅತ್ಯಧಿಕ ಜಾಗತಿಕ ವೇತನ ಹೆಚ್ಚಳ ಕಾಣಲಿದೆ: ಸಮೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವರ್ಕ್‌ಫೋರ್ಸ್ ಕನ್ಸಲ್ಟೆನ್ಸಿ ಇಸಿಎ ಇಂಟರ್‌ನ್ಯಾಶನಲ್‌ನ ಸಮೀಕ್ಷೆಯ ಪ್ರಕಾರ, ಭಾರತವು 2023 ರಲ್ಲಿ 4.6 ಪ್ರತಿಶತದಷ್ಟು ಜಾಗತಿಕ ವೇತನ ಹೆಚ್ಚಳವನ್ನು ಕಾಣಲಿದೆ.

68 ದೇಶಗಳು ಮತ್ತು 360 ಕ್ಕೂ ಹೆಚ್ಚು ನಗರಗಳಲ್ಲಿನ ಬಹುರಾಷ್ಟ್ರೀಯ ಕಂಪನಿಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಚೀನಾವು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು ಪಾಕಿಸ್ಥಾನ ಮತ್ತು ಶ್ರೀಲಂಕಾಗಳು ಅತ್ಯಂತ ಕೆಳಗಿನ ಸ್ಥಾನಗಳಲ್ಲಿವೆ.

ಭಾರತ, ವಿಯೆಟ್ನಾಂ (ಶೇ 4.0), ಚೀನಾ (ಶೇ 3.8), ಬ್ರೆಜಿಲ್ (ಶೇ 3.4) ಮತ್ತು ಸೌದಿ ಅರೇಬಿಯಾ (ಶೇ 2.3) 2023 ರಲ್ಲಿ ವೇತನ ಹೆಚ್ಚಳವನ್ನು ನಿರೀಕ್ಷಿಸುವ ರಾಷ್ಟ್ರಗಳಾಗಿದ್ದರೆ, ಪಾಕಿಸ್ತಾನ (ಶೇ -9.9), ಘಾನಾ (-11.9 ಶೇಕಡಾ), ಟರ್ಕಿ (-14.4 ಶೇಕಡಾ) ಮತ್ತು ಶ್ರೀಲಂಕಾ (-20.5 ಶೇಕಡಾ) ರಷ್ಟು ಇಳಿಕೆಗಳನ್ನು ಕಾಣಲಿವೆ ಎನ್ನಲಾಗಿದೆ.

ಸಮೀಕ್ಷೆಯ ಪ್ರಕಾರ, ಕೇವಲ 37 ಪ್ರತಿಶತ ದೇಶಗಳು ನೈಜ-ಅವಧಿಯ ವೇತನ ಹೆಚ್ಚಳವನ್ನು ವರದಿ ಮಾಡಲಿವೆ ಎನ್ನಲಾಗಿದ. ಏಕೆಂದರೆ ಗಗನಕ್ಕೇರುತ್ತಿರುವ ಹಣದುಬ್ಬರವು 2023 ರಲ್ಲಿ ಸಂಬಳ ಹೆಚ್ಚಳದ ವೇಗವನ್ನು ತಗ್ಗಿಸಲಿದೆ. ಅತ್ಯಂತ ಕೆಟ್ಟದಾಗಿ ಹಾನಿಗೊಳಗಾದ ಪ್ರದೇಶವು ಯುರೋಪ್ ಆಗಿರಬಹುದು ಎನ್ನಲಾಗಿದೆ. ವರದಿಯ ಪ್ರಕಾರ, US ಈ ವರ್ಷ ಶೇಕಡಾ 4.5 ರಷ್ಟು ನೈಜ-ಅವಧಿಯ ಕುಸಿತವನ್ನು ಕಂಡಿದೆ ಎಂದು ಬ್ಲೂಮ್‌ ಬರ್ಗ್‌ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!