ಮಕ್ಕಳಿಗೆ ವಿಡಿಯೋ ಗೇಮ್ ಆಡಲು ಬಿಡಿ, ಇದರಿಂದ ಬ್ರೇನ್ ಸೂಪರ್ ಆಕ್ಟೀವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳು ಹೆಚ್ಚೆಚ್ಚು ವಿಡಿಯೋ ಗೇಮ್ ಆಡಿ ಸ್ಕ್ರಿನ್‌ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದ ಪೋಷಕರಿಗೆ ಆತಂಕ ಹೆಚ್ಚಾಗಿದೆ. ಆದರೆ ವರದಿಯೊಂದರ ಪ್ರಕಾರ ಮಕ್ಕಳಿಗೆ ವಿಡಿಯೋ ಗೇಮ್ ಆಡಲು ಬಿಡಬೇಕಂತೆ.

ಹೌದು, ವಿಡಿಯೋ ಗೇಮ್ ಆಡುವ ಮಕ್ಕಳ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದು ವರ್ಮೊಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.
ಸಂಶೋಧನೆಯ ಭಾಗವಾಗಿ ವಿಜ್ಞಾನಿಗಳು ಎರಡು ಸಾವಿರ ಮಕ್ಕಳ ಮೆದುಳಿನ ಕಾರ್ಯ ಪರೀಕ್ಷೆ ಮಾಡಿದ್ದಾರೆ. ಮಕ್ಕಳ ಸ್ಕ್ಯಾನ್‌ಗಳನ್ನು ಇತರ ಮಕ್ಕಳಿಗೆ ಹೋಲಿಸಿದ್ದಾರೆ. ಈ ಹೋಲಿಕೆಯಲ್ಲಿ ವಿಡಿಯೋ ಗೇಮ್ ಆಡದ ಮಕ್ಕಳಿಗಿಂತ ವಿಡಿಯೋ ಗೇಮ್ ಆಡುವ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿರುವುದು ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!