Sunday, July 3, 2022

Latest Posts

ಅಂಡರ್‌-19 ಕ್ರಿಕೆಟ್‌ ವಿಶ್ವಕಪ್ ಕ್ವಾರ್ಟರ್‌ ಫಿನಾಲೆ: ಇಂದು ಭಾರತ- ಬಾಂಗ್ಲಾದೇಶ ಮುಖಾಮುಖಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ನಡುವೆ ನಡೆಯುತ್ತಿರುವ ಅಂಡರ್‌-19 ವಿಶ್ವ ಕಪ್‌ ನ ಕ್ವಾರ್ಟರ್‌ ಫಿನಾಲೆಯಲ್ಲಿ ಇಂದು ಭಾರತದ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಲಿದೆ.
ಭಾರತ ತಂಡದ ನಾಯಕ ಯಶ್‌ ಧುಳ್‌ ಸೇರಿ 6 ಮಂದಿಗೆ ಸೋಂಕು ತಗುಲಿದ್ದು, ಅವರನ್ನು ಪ್ರತ್ಯೇಕವಾಗಿಸಿ, ನಾಯಕನ ಅನುಪಸ್ಥಿತಿಯಲ್ಲಿ ಭಾರತ ಕ್ವಾರ್ಟರ್‌ ಫಿನಾಲೆ ಹಂತ ತಲುಪಿದೆ.
ಈಗಾಗಲೇ ನಾಲ್ಕು ಬಾರಿ ಚಾಂಪಿಯನ್‌ ಆಗಿರುವ ಭಾರತ ಈಗ ಮತ್ತೊಮ್ಮೆ ಚಾಂಪಿಯನ್‌ ಪಟ್ಟಕ್ಕೇರಲು ಶ್ರಮಿಸುತ್ತಿದೆ.
ಇಂದು ಸಂಜೆ 5:30ಕ್ಕೆ ಪ್ರಾವಿಡೆನ್ಸ್‌ ಸ್ಟೇಡಿಯಂ ನಲ್ಲಿ ಭಾರತ- ಬಾಂಗ್ಲಾದೇಶ ಸೆಣೆಸಾಡಲಿದೆ.  ಕ್ವಾರ್ಟರ್‌ ಫಿನಾಲೆಯ ನೇರ ಪ್ರಸಾರವನ್ನು ಸೋನಿ ಸ್ಪೋರ್ಟ್‌ ನೆಟ್ವರ್ಕ್‌ ಹಾಗೂ ಡಿಸ್ನಿ ಹಾಟ್ ಸ್ಟಾರ್‌ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.
ಭಾರತದ ತಂಡದಿಂದ ಯಶ್ ಧುಳ್​​ (ನಾಯಕ), ಹರ್ನೂರ್ ಸಿಂಗ್, ಅಂಗಕ್ರಿಷ್ ರಘುವಂಶಿ, ಶೇಖ್ ರಶೀದ್, ನಿಶಾಂತ್ ಸಿಂಧು, ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ಮಾನವ ಪರಕ್, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್ಗೆಕರ್, ವಿಕ್ಕಿ ಓಸ್ವಾಲ್, ಗರ್ವ್ ಸಂಗ್ವಾನ್, ದಿನೇಶ್ ಬಾನಾ, ಆರಾಧ್ಯ ಯಾದವ್, ರಾಜ್ ಬಾವಾ, ವಾಸು ವತ್ಸ್, ರವಿ ಕುಮಾರ್‌ ಪಂದ್ಯದಲ್ಲಿ ಇರಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss