ಐಎನ್​ಡಿಐಎ ಒಕ್ಕೂಟದವರಿಗೆ ನೀತಿ, ನಿಯತ್ತು, ನೇತೃತ್ವ ಮೂರೂ ಇಲ್ಲ: ಜೋಶಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಎನ್​ಡಿಐಎ ಒಕ್ಕೂಟ ಒಂದು ಫೋಟೋ ಶೂಟ್ ಅಷ್ಟೇ ಆಗಿತ್ತು. ಆ ಒಕ್ಕೂಟದವರಿಗೆ ನೀತಿ, ನಿಯತ್ತು, ನೇತೃತ್ವ ಮೂರೂ ಇಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಐಎನ್​ಡಿಐಎ ಮೈತ್ರಿಕೂಟದ ಪಕ್ಷಗಳ ನಡುವೆ ಬಿರುಕು ಮೂಡಿರುವ ವಿಚಾರವಾಗಿ ಪ್ರಹ್ಲಾದ್ ಜೋಶಿ ಮಾತನಾಡಿದರು.

ಅದೊಂದು ಅಸಹಜ, ಅಸ್ವಾಭಾವಿಕ ಒಪ್ಪಂದ ಆಗಿತ್ತು. ಹಾಗಾಗಿ ಐಎನ್​ಡಿಐಎ ಒಕ್ಕೂಟ ಸಾಯುತ್ತಿದೆ. ನಿತೀಶ್ ಕುಮಾರ್ ಬಿಜೆಪಿಗೆ ಸೇರುವ ಬಗ್ಗೆ ನಾನು ಏನೂ ಮಾತಾಡಲ್ಲ. ಅವರು ಪಕ್ಷ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಆ ಬಗ್ಗೆ ಮಾತಾಡಲು ನಾನು ಸೂಕ್ತವೂ ಅಲ್ಲ ಎಂದರು.

ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವೇಳೆ  ಜೋಶಿ ಗೈರು
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಮರಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ವೇಳೆ ಹುಬ್ಬಳ್ಳಿಯ ಬಿಜೆಪಿ ನಾಯಕರ ಪೈಕಿ ಒಬ್ಬರಾಗಿರುವ ಪ್ರಹ್ಲಾದ್ ಜೋಶಿ ಅನುಪಸ್ಥಿತರಾಗಿದ್ದರು. ಈ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ಉಪರಾಷ್ಟ್ರಪತಿ ಜೊತೆ ಸಭೆಯಲ್ಲಿದ್ದ ಕಾರಣ ಭಾಗಿಯಾಗಿಲ್ಲ ಎಂದರು.

ಶೆಟ್ಟರ್ ಪಕ್ಷ ಸೇರ್ಪಡೆ ವೇಳೆ ಇನ್ನೊಂದು ಅರ್ಧ ಗಂಟೆಯಲ್ಲಿ ಸೇರ್ಪಡೆ ಆಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನನಗೆ ಕರೆ ಮಾಡಿ ಹೇಳಿದ್ದರು. ಜಗದೀಶ್​ ಶೆಟ್ಟರ್ ಅವರು ಬಿಜೆಪಿಯಲ್ಲೇ ಇದ್ದವರು. ಶೆಟ್ಟರ್ ವಾಪಸ್​​ ಬಂದಿದ್ದು ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರು.

ಪಕ್ಷ ಬಿಟ್ಟವರನ್ನು ವಾಪಸ್ ಕರೆತರುವ ವಿಚಾರ ಮಾತನಾಡಿದ ಜೋಶಿ, ಯಾರು ನಮ್ಮ ಪಕ್ಷದ ಸಿದ್ಧಾಂತ, ಮೋದಿ ನಾಯಕತ್ವ ಒಪ್ಪಿ ಬರುತ್ತಾರೋ ಸ್ವಾಗತ ಕೋರುತ್ತೇವೆ. ಅವರೆಲ್ಲರನ್ನೂ ಹಂತಹಂತವಾಗಿ ವಾಪಸ್ ಕರೆತರುವ ಬಗ್ಗೆ ರಾಷ್ಟ್ರೀಯ ಘಟಕ, ರಾಜ್ಯ ಘಟಕಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!