June 24, 2026
Wednesday, June 24, 2026
spot_img

ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ: ‘ಸನ್‌ಸೆಟ್ ಕ್ಲಾಸ್’ ಅಸ್ತ್ರ ಪ್ರಯೋಗಿಸಿದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಕುದುರಿಸಲು ಉಭಯ ದೇಶಗಳೂ ನಿರಂತರ ಮಾತುಕತೆ ನಡೆಸುತ್ತಿವೆ. ಪರಸ್ಪರ ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಂಧಾನಗಳು ಚುರುಕಾಗಿವೆ. ಈ ಮಧ್ಯೆ, ಮಾಧ್ಯಮ ವರದಿಗಳ ಪ್ರಕಾರ, ಭಾರತವು ಒಪ್ಪಂದದಲ್ಲಿ ‘ಸನ್‌ಸೆಟ್ ಕ್ಲಾಸ್’ (Sunset Clause) ಸೇರಿಸಬೇಕೆಂಬ ಬಲವಾದ ಬೇಡಿಕೆಯನ್ನು ಅಮೆರಿಕದ ಮುಂದೆ ಇಟ್ಟಿದೆ.

ಏನಿದು ‘ಸನ್‌ಸೆಟ್ ಕ್ಲಾಸ್’?

ಸನ್‌ಸೆಟ್ ಕ್ಲಾಸ್ ಎಂದರೆ ಒಪ್ಪಂದದ ಯಾವುದೇ ನಿಯಮ ಅಥವಾ ಕಾನೂನಿಗೆ ಒಂದು ನಿರ್ದಿಷ್ಟ ಕಾಲಮಿತಿಯನ್ನು ವಿಧಿಸುವುದು. ಈ ಅವಧಿ ಮುಗಿದ ತಕ್ಷಣ ಆ ನಿಯಮಗಳು ಸ್ವಯಂಚಾಲಿತವಾಗಿ ರದ್ದಾಗುತ್ತವೆ. ಉಭಯ ದೇಶಗಳು ಒಮ್ಮತದಿಂದ ನವೀಕರಿಸಿದರೆ ಮಾತ್ರ ಅವು ಮುಂದುವರಿಯುತ್ತವೆ. ಈ ಕ್ಲಾಸ್ ಇಲ್ಲದಿದ್ದರೆ, ಒಪ್ಪಂದ ಇರುವವರೆಗೂ ಎಲ್ಲಾ ಕಠಿಣ ನಿಯಮಗಳೂ ಮುಂದುವರಿಯುತ್ತವೆ.

ಭಾರತಕ್ಕೆ ಈ ನಿಯಮ ಏಕೆ ಮುಖ್ಯ?

ಅಮೆರಿಕದ ವ್ಯಾಪಾರ ಮತ್ತು ಸುಂಕದ (Tariff) ನೀತಿಗಳು ಪದೇ ಪದೇ ಬದಲಾಗುತ್ತಿರುತ್ತವೆ. ಹೀಗಾಗಿ, ಭವಿಷ್ಯದಲ್ಲಿ ಭಾರತದ ಹಿತಾಸಕ್ತಿಗೆ ಧಕ್ಕೆಯಾಗದಂತೆ ತಡೆಯಲು ಈ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ. ಆರಂಭದಲ್ಲಿ ಲಾಭದಾಯಕ ಎನಿಸುವ ನಿಯಮಗಳು, ಕಾಲಾನಂತರದಲ್ಲಿ ದೇಶದ ಆರ್ಥಿಕತೆಗೆ ಅನನುಕೂಲ ಅಥವಾ ಅಪ್ರಸ್ತುತ ಎನಿಸಬಹುದು. ಅಂತಹ ಸಂದರ್ಭಗಳಲ್ಲಿ ನಿಯಮಗಳನ್ನು ಸುಲಭವಾಗಿ ಪರಿಷ್ಕರಿಸಲು ಅಥವಾ ಕೈಬಿಡಲು ‘ಸನ್‌ಸೆಟ್ ಕ್ಲಾಸ್’ ನೆರವಾಗುತ್ತದೆ. ಜಾಗತಿಕವಾಗಿ ಹಲವು ದೇಶಗಳು ಈಗಾಗಲೇ ಇಂತಹ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !