ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತ ಮತ್ತು ಬಾಂಗ್ಲಾದೇಶ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಬುಧವಾರ ಡಿಸೆಂಬರ್ 14 ರಿಂದ ಪ್ರಾರಂಭವಾಗಲಿದೆ.
ಪಂದ್ಯವು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶವು 2-1 ರಿಂದ ಭಾರತಕ್ಕೆ ಆಘಾತಕಾರಿ ಸೋಲನ್ನು ನೀಡಿತ್ತು. ಇದೀಗ ಟೆಸ್ಟ್ ಮಾದರಿಯಲ್ಲಿ ಭಾರತ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಹೆಬ್ಬೆರಳಿನ ಗಾಯದಿಂದಾಗಿ 1 ನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಏತನ್ಮಧ್ಯೆ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರು ಸಂಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ. ಶಮಿ ಭುಜದ ಗಾಯವನ್ನು ಪಡೆದುಕೊಂಡಿದ್ದು, ಜಡೇಜಾ ಪ್ರಸ್ತುತ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಸ್ಥಾನದಲ್ಲಿ ಸೌರಭ್ ಕುಮಾರ್ ಹಾಗೂ ಜಯದೇವ್ ಉನಾದ್ಕತ್ ಗೆ ಸ್ಥಾನ ಕಲ್ಪಿಸಲಾಗಿದೆ.
ಮೊದಲ ಟೆಸ್ಟ್ ಪಂದ್ಯ ಯಾವಾಗ ಆರಂಭ?
ಭಾರತ vs ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 14 ಬುಧವಾರದಂದು ಆರಂಭವಾಗಲಿದೆ.
ಎಲ್ಲಿ ನಡೆಯಲಿದೆ?
ಭಾರತ ಮತ್ತು ಬಾಂಗ್ಲಾದೇಶದ ಮೊದಲ ಟೆಸ್ಟ್ ಪಂದ್ಯವು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?
ಭಾರತ vs ಬಾಂಗ್ಲಾದೇಶ, ಮೊದಲ ಟೆಸ್ಟ್ ಪಂದ್ಯವು ಬೆಳಗ್ಗೆ 9:00 ಕ್ಕೆ ಪ್ರಾರಂಭವಾಗಲಿದೆ.
ಯಾವ ಚಾನೆಲ್‌ನಲ್ಲಿ ಪ್ರಸಾರ?
ಭಾರತ vs ಬಾಂಗ್ಲಾದೇಶ, ಮೊದಲ ಟೆಸ್ಟ್ ಪಂದ್ಯ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.
ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ನೋಡಬಹುದು?
ಭಾರತ vs ಬಾಂಗ್ಲಾದೇಶ ಟೆಸ್ಟ್ ಪಂದ್ಯವನ್ನು ಸೋನಿ ಲೈವ್ ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಜಿಯೋ ಚಂದಾದಾರರು ಸೋನಿ ಜಿಯೋ ಟಿವಿ ಆಪ್ ನಲ್ಲಿ ಸೋನಿ ಚಾನಲ್ ಮೂಲಕ ಮೊಬೈಲ್ ನಲ್ಲಿ ಪಂದ್ಯ ವೀಕ್ಷಿಸಬಹುದು.