IND vs BAN | ಶಾಕಿಬ್‌ ಸ್ಪಿನ್ ದಾಳಿಗೆ ಅಲ್ಪಮೊತ್ತಕ್ಕೆ ಕುಸಿದ ಭಾರತ: ಅರ್ಧಶತಕ ಸಿಡಿಸಿ‌ ಏಕಾಂಗಿ ಹೋರಾಟ ನಡೆಸಿದ ಕೆ.ಎಲ್‌ ರಾಹುಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾದೇಶದ ಮೀರ್‌ ಪುರ್‌ ನಲ್ಲಿ ಸಾಗುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ 186 ರನ್‌ಗಳ ಅಲ್ಪಮೊತ್ತಕ್ಕೆ ಕುಸಿದಿದೆ.
ಭಾರತದ ಪರ ಆರಂಭಿಕರಾದ ಶಿಖರ್‌ ಧವನ್‌ (7), ರೋಹಿತ್‌ ಶರ್ಮಾ (27) ವಿಫಲರಾದರು. ಆ ಬಳಿಕ ಬಂದ ಕೊಹ್ಲಿ(9) ಲಿಟನ್‌ ದಾಸ್‌ ಕವರ್‌ ಕ್ಷೇತ್ರದಲ್ಲಿ ಹಿಡಿದ ಅದ್ಭುತ ಕ್ಯಾಚ್‌ ಗೆ ಬಲಿಯಾದರು. ಶ್ರೇಯಸ್‌ ಐಯ್ಯರ್‌ (24) ಬ್ಯಾಟ್‌ ಸಹ ಸದ್ದು ಮಾಡಲಿಲ್ಲ. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕೆ.ಎಲ್ ರಾಹುಲ್ 70 ಎಸೆತಗಳಲ್ಲಿ 73 ರನ್ ಗಳಿಸಿದರು. ಅವರಿಗೆ ಕೊನೆಗೆ ವಾಷಿಂಗ್ಟನ್‌ ಸುಂದರ್‌ (19) ಹೊರತುಪಡಿಸಿದರೆ ಯಾರಿಂದಲೂ ಸೂಕ್ತ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಭಾರತ 41.2 ಓವ ಗಳಲ್ಲಿ 186 ರನ್‌ ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾ ಪರ ಶಕಿಬ್ ಅಲ್ ಹಸನ್‌ 5 ವಿಕೆಟ್‌ ಕಬಳಿಸಿ ಮಾರಕ ದಾಳಿ ನಡೆಸಿದರೆ, ವೇಗಿ ಎಬಾಡೋಟ್ ಹೊಸೇನ್ 4 ವಿಕೆಟ್‌ ಗಳಿಸಿ ಉತ್ತಮ ಸಾಥ್‌ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!