ಬೆಳೆಯೋದಕ್ಕೆ ಆತುರ ಬೇಡ, ಆರಾಮಾಗಿ ಬೆಳೆಯಿರಿ, ಎಂಜಾಯ್ ಮಾಡಿ – ಕಿಚ್ಚ ಸುದೀಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ನಟ ಕಿಚ್ಚ ಸದೀಪ್‌ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಕಟೀಲು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸುದೀಪ್‌ರಿಗೆ ಆಡಳಿತ ಮಂಡಳಿ ಶೇಷವಸ್ತ್ರ, ದೇವರ ಭಾವಚಿತ್ರ, ಪ್ರಸಾದ ನೀಡಿದರು. ಬಳಿಕ ಅಲ್ಲಿ ನಡೆದ ನುಡಿಹಬ್ಬದಲ್ಲಿ ಸುದೀಪ್‌ ಭಾಗಿಯಾದರು.

ಸಂಸ್ಥೆ ಬೆಳೆಯುತ್ತಿದೆ. ಎಷ್ಟೋ ಕೋಟಿ ಹಾಕಿ ಕಟ್ಟೋದು ಮುಖ್ಯ ಅಲ್ಲ. ಸಂಸ್ಥೆ ಕಟ್ಟಲಿಕ್ಕೆ ಕಷ್ಟ ಅಲ್ಲ. ಕಟ್ಟಡ, ಸ್ಕೂಲ್ ಕಟ್ಟಬಹುದು. ಅದಕ್ಕೆ ಜೀವ ತುಂಬೋದು ನೀವುಗಳು, ವಿದ್ಯಾರ್ಥಿಗಳು. ಸ್ಕೂಲ್ ಚೆನ್ನಾಗಿ ಇರಬೇಕೆಂದ್ರೆ ಬೆಲೆ, ಜೀವ ವಿದ್ಯಾರ್ಥಿಗಳಿಂದಲೇ. ಈ ಜೀವನವನ್ನು ಚೆನ್ನಾಗಿ ಎಂಜಾಯ್ ಮಾಡಿ, ಮತ್ತೆ ಈ ಜೀವನ ಬರಲ್ಲ. ಇವತ್ತಾಗಿದ್ದು ಮತ್ತೆ ಬರಲ್ಲ. ಸಮಯ ಅನ್ನೋದು ಮತ್ತೆ ಸಿಗಲ್ಲ. ಇದ್ದಾಗ ಜಸ್ಟ್ ಎಂಜಾಯ್ ಎಂದರು ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್.

ಕಟೀಲು ದೇಗುಲದ ಶಿಕ್ಷಣ ಸಂಯೋಜನೆಯಲ್ಲಿ ನಡೆಯುತ್ತಿರುವ ನುಡಿಹಬ್ಬದಲ್ಲಿ ಮಾತನಾಡಿದ ಅವರು ಮಾತಿಗೆ ತೊಡಗಿದಂತೆ ಪ್ರೇಕ್ಷಕರ ಕಿಚ್ಚ ಕಿಚ್ಚ ಕಿಚ್ಚ ಘೋಷಣೆಗೆ ನಾನು ಕಿಚ್ಚ ಸುದೀಪ್. ಹುಚ್ಚ ಸುದೀಪ್ ಅಲ್ಲ ತಾನೆ ಎಂದು ತಮಾಷೆ ಮಾಡಿದರು. ನನ್ನ ಅಕ್ಕನಿಂದಾಗಿ ಕಟೀಲಿಗೆ ಮೊದಲ ಬರುತ್ತಿದ್ದೇನೆ. ಇಲ್ಲಿ ಕಾಲಿಡುತ್ತಿದ್ದಾಗನೆ ಪಾಸಿಟಿವ್ ಫೀಲಿಂಗ್ ಕಂಡೆ. ತುಂಬ ಸಿಂಪಲ್ ದೇವಸ್ಥಾನ ಆದರೆ ತುಂಬ ಚೆನ್ನಾಗಿರುವ ಮತ್ತೆ ಮತ್ತೆ ಬರಬೇಕು ಎನಿಸುವಂತಹ ದೇವಸ್ಥಾನ. ಕೆಲಸ ಸಿಕ್ಕಾಪಟ್ಟೆ ಇರುತ್ತದೆ. ನಿಮ್ಮಂತಹವರ ಮುಖ ನೋಡಿ ಅಭಿಮಾನ ಕಂಡು ಮತ್ತೆ ಕೆಲಸ ಮಾಡುವಂತಹ ಮನಸ್ಸಾಗುತ್ತದೆ. ಇಷ್ಟು ಪ್ರೀತಿ ಕೊಟ್ಟು ಹಾರೈಸಿದ್ದಕ್ಕೆ ಥ್ಯಾಂಕ್ಸ್ ಎಂದರು.

ವಿದ್ಯಾರ್ಥಿಗಳು ಏನಾಗಲಿ, ಮುಂದೆ ಸಾಗೂ ನೀ… ಬಯಸ್ಸಿದ್ದೆಲ್ಲ ಸಿಗಲಿ ಬಾಳಲಿ ಬಯಸ್ಸಿದ್ದೆಲ್ಲ ಸಿಗದು ಬಾಳಲಿ ಹಾಡನ್ನು ಹಾಡಿದರು.
ವಿದ್ಯಾರ್ಥಿನಿ ಗಾಯತ್ರೀ ಕೇಳಿದ ಪ್ರಶ್ನೆ ತಾಯಿನಾಡು ತುಳುನಾಡು, ತುಳು ಭಾಷೆ ನಾಡಿನ ಬಗ್ಗೆ ಏನು ಅಭಿಪ್ರಾಯ ಕೇಳಿದಾಗ ನೀವೇ ಹೇಳಿದ್ರಲ್ಲ ನೀವೇ ಹೇಳದ್ರಲ್ಲ ನನ್ನ ತಾಯಿ ಅಂತ. ತಾಯಿ ಬಗ್ಗೆ ಅಭಿಪ್ರಾಯ ಹೇಳಬಾರದು. ಪ್ರೀತಿ ಇರಬೇಕು ಎಂದರು.  ವಿದ್ಯಾರ್ಥಿಗಳು ರಚಿಸಿದ ಸುದೀಪ್ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟು ಹಸ್ತಾಕ್ಷರ ಪಡೆದರು.

ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಾತನಾಡಿ, ಇಲ್ಲಿನ ಮಕ್ಕಳು ದೇವೀಸನ್ನಿಧಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ಬಳಿಕ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು. ಹೆತ್ತವರಿಗೆ ಗೌರವ ಕೊಡಬೇಕು. ಹಲವಾರು ಕ್ಷೇತ್ರಗಳಲ್ಲಿ ಅವಕಾಶ ಬಳಸಿಕೊಂಡು ಸಾಧನೆ ಮಾಡಬೇಕು. ಸಿನಿಮಾ, ರಾಜಕೀಯ, ಉದ್ಯಮ ಹೀಗೆ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಪ್ರಯತ್ನದಿಂದ ಸಾಧನೆ ಮಾಡಬೇಕು. ಪಿಯುಸಿ, ಪದವಿ ಬಳಿಕ ಕೇವಲ ವೈದ್ಯಕೀಯ, ಇಂಜಿನಿಯರಿಂಗ್ ಮಾತ್ರವಲ್ಲದೆ ನಾಣಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!