Tuesday, August 16, 2022

Latest Posts

INDIA vs ENG | ಟಾಸ್‌ ಸೋತು ಬ್ಯಾಟಿಂಗ್‌ ಗೆ ಇಳಿದ ಭಾರತ, ಪ್ಲೇಯಿಂಗ್‌ XI ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕೋರೋನಾ ಸೋಂಕು ಹೆಚ್ಚಳ ಕಂಡಿದ್ದರಿಂದ ಕಳೆದ ವರ್ಷ ಮುಂದೂಡಲ್ಪಟ್ಟಿದ್ದ ಇಂಡಿಯಾ- ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್‌ ಸರಣಿ ಮತ್ತೆ ಆರಂಭಗೊಂಡಿದೆ.
ಸರಣಿಯ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಬರ್ಮಿಂಗ್‌ ಹ್ಯಾಮ್‌ ಕ್ರೀಡಾಗಣದಲ್ಲಿ ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ಆತಿಥೇಯ ಇಂಗ್ಲೆಂಡ್‌ ತಂಡದ ಕಪ್ತಾನ ಬೆನ್‌ ಸ್ಟೋಕ್ಸ್‌ ಮೊದಲು ಬೌಲಿಂಗ್‌ ತೀರ್ಮಾನ ಕೈಗೊಂಡಿದ್ದಾರೆ. ಕೊರೋನಾ ಸೋಂಕಿಗೆ ಒಳಗಾಗಿರುವ ಖಾಯಂ ನಾಯಕ ರೋಹಿತ್‌ ಶರ್ಮಾ ಸ್ಥಾನದಲ್ಲಿ ಆರಂಭಿಕರಾಗಿ ಚೇತೇಶ್ವರ ಪೂಜಾರ ಅವರಿಗೆ ಭಡ್ತಿ ನೀಡಿ ಭಾರತ ಅಚ್ಚರಿಯ ತೀರ್ಮಾನ ಕೈಗೊಂಡಿದೆ. ಭಾರತೀಯ ತಂಡವನ್ನು ಇದೇ ಮೊದಲ ಬಾರಿಗೆ ವೇಗಿ ಜೆಸ್ಪ್ರಿತ್‌ ಬೂಮ್ರಾ ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಯುವ ಆಟಗಾರರಾದ ಶ್ರೇಯಸ್ ಐಯ್ಯರ್‌ ಹಾಗೂ ಹನುಮಾ ವಿಹಾರಿಗೆ ಸ್ಥಾನ ಕಲ್ಪಿಸಲಾಗಿದೆ.

ಭಾರತ ತಂಡ:
ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (c)

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss