ಮಳೆಯಲ್ಲಿ ತೆಂಗಿನಕಾಯಿ ಕ್ಯಾಚ್ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಅದೆಷ್ಟೋ ಘಟನೆಗಳು ನೋಡುಗರ ಮುಖದಲ್ಲಿ ನಗು, ಆಶ್ಚರ್ಯ ತರಿಸುತ್ತವೆ. ಚಿತ್ರ, ವಿಚಿತ್ರ ಘಟನೆಗಳು ಅರ್ಥಗರ್ಭಿತವಾದ ದೃಶ್ಯಗಳನ್ನೂ ಸಹ ಕಾಣಬಹುದು. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ತೆಂಗಿನಕಾಯಿ ಹಿಡಿದ ದೃಶ್ಯ ವೈರಲ್‌ ಆಗಿದೆ.

ಕರ್ನಾಟಕದ ಮಂಗಳೂರಿನಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಮಳೆಯಾಗಿದೆ. ಎಲ್ಲಾ ಕಡೆ ಮಿನಿ ಫಾಲ್ಸ್‌ ಶುರುವಾಗಿದ್ದು, ರಸ್ತೆಗಳು ಕೆರೆಯಂತಾಗಿವೆ. ಈ ನಡುವೆ ಮಳೆ ನೀರು ತುಂಬಿ ಹರಿಯುತ್ತಿರುವ ಕಾಲುವೆಯಲ್ಲಿ ಕೊಚ್ಚಿಹೋಗುತ್ತಿದ್ದ ತೆಂಗಿನಕಾಯಿ ಹಿಡಿಯಲು ವ್ಯಕ್ತಿಯೊಬ್ಬನ ಪ್ರಯತ್ನ ನೋಡುಗರ ಹುಬ್ಬೇರಿಸುವಂತೆ ಮಾಡಿದೆ. ಈ ವಿಡಿಯೋಗೆ ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ ಇದಕ್ಕೆ ಪೂರಕವಾಗುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!