ಭಾರತ VS ದಕ್ಷಿಣ ಆಫ್ರಿಕಾ: ಎರಡನೇ ದಿನದಾಟ ಆರಂಭ, ಅತ್ಯುತ್ತಮ ಬೌಲಿಂಗ್ ಅಗತ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಟೆಸ್ಟ್‌ನ ಎರಡನೇ ದಿನ. ಈಗಾಗಲೇ ಪಂದ್ಯ ಆರಂಭವಾಗಿದ್ದು, ದಕ್ಷಿಣ ಆಫ್ರಿಕಾ 17/1 ಸ್ಕೋರ್‌ನೊಂದಿಗೆ ತನ್ನ ಮೊದಲ ಇನ್ನಿಂಗ್ಸ್ ಮುಂದುವರಿಸಲಿದೆ.
ಮೊದಲ ದಿನ ಭಾರತ ಕೇವಲ 223 ರನ್ ಗಳಿಸಿತ್ತು. ನಾಯಕ ಕೋಹ್ಲಿ ತಂಡದ ಗರಿಷ್ಠ ಮೊತ್ತ 79 ರನ್ ಬಾರಿಸಿದ್ರು. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡಾ 4 ವಿಕೆಟ್ ಪಡೆದು ಭಾರತದ ಬ್ಯಾಟರ್‌ಗಳನ್ನ ಕಟ್ಟಿ ಹಾಕಿದ್ದರು.
ಏಡನ್ ಮಾರ್ಕ್ರಾಮ್ ಮತ್ತು ಕೇಶವ್ ಮಹರಾಜ್ ಇಂದು ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಮುನ್ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಮುನ್ನಡೆ ಸಾಧಿಸಬೇಕಾದರೆ ಭಾರತದ ಬೌಲರ್‌ಗಳು ತಮ್ಮ ಬೆಸ್ಟ್ ನೀಡಬೇಕಿದೆ. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಕಂಡರೆ ದಕ್ಷಿಣ ಆಫ್ರಿಕಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!