ಭಾರತ vs ದ. ಆಫ್ರಿಕಾ | 2ನೇ ಟಿ 20 ಪಂದ್ಯಕ್ಕೆ ಮಳೆ ಭೀತಿ: ಮ್ಯಾಚ್‌ ನಡೆಯಲಿದೆಯಾ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇಂದು (ಅ.2)ರಂದು ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂ ಎರಡನೇ ಭಾರತ vs ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ 20 ಗೆ ಆತಿಥ್ಯ ವಹಿಸುತ್ತದೆ. ಕೇರಳದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತವು 8 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದಿತ್ತು. ಸರಣಿಯನ್ನು ಜೀವಂತವಾಗಿಡಲು ಹರಿಣಗಳು ಈಗ ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿದೆ. T20 ವಿಶ್ವಕಪ್‌ನಲ್ಲಿ ಸಹ ಎರಡೂ ತಂಡಗಳ ಒಂದೇ ಗುಂಪಿನಲ್ಲಿದ್ದು, ಆದ್ದರಿಂದ ಎರಡೂ ತಂಡಗಳಿಗೆ ಈ ಸರಣಿಯು ನಿರ್ಣಾಯಕವಾಗಿದೆ. ಆದರೆ, ಗುವಾಹಟಿಯ ಪ್ರಸ್ತುತ ಹವಾಮಾನ ವರದಿಗಳನ್ನು ಅಭಿಮಾನಿಗಳಿಗೆ ಚಿಂತೆಗೀಡುಮಾಡಿದೆ.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಈವರೆಗೆ ಕೇವಲ ಐದು ಟಿ20 ಪಂದ್ಯಗಳನ್ನು ಆಯೋಜಿಸಿದೆ. ಅದವುಗಳಲ್ಲಿ ಒಂದು ಪಂದ್ಯ ಮಳೆಯಿಂದಾಗಿ ರಸದ್ದಾಗಿರತ್ತು. ಈ ಸ್ಥಳದಲ್ಲಿ 2017 ರಲ್ಲಿ ಕೊನೆಯ ಟಿ 20 ಪಂದ್ಯ ನಡೆದಿತ್ತು. ಇದೀಗ ಭಾನುವಾರ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ಆಕಾಶದಲ್ಲಿ ಮೋಡ ಕವಿದಿದ್ದು, ನಗರದಲ್ಲಿ ಭಾನುವಾರ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಸಂಜೆ 5 ವೇಳೆಗೆ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಉಳಿದಂತೆ ಭಾನುವಾರ ಮೋಡ ಕವಿದ ವಾತಾವರಣ ಇರುತ್ತದೆ ಎಂದು ವರದಿ ಹೇಳಿದೆ. ಇಂದಿನ ಪಂದ್ಯಕ್ಕೆ ಶೇ. 25ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿರುವ ಅಭಿಮಾನಿಗಳು ಪಂದ್ಯಕ್ಕೆ ವರುಣ ಕೃಪೆ ತೋರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಹವಾಮಾನದಿಂದಾಗಿ ಪಿಚ್‌ ತೇವಗೊಂಡಿದ್ದು, ಪಂದ್ಯ ಸಾಗಿದಂತೆ ಇಬ್ಬನಿ ಕಾಣಿಸಿಕೊಳ್ಳಲಿದೆ, ಇದು ಟಾಸ್ ಸಮಯದಲ್ಲಿ ಕ್ಯಾಪ್ಟನ್‌ ಗಳ ನಿರ್ಣಯದ ಮೇಲೆ ಪರಿಣಾಮ ಬೀರಲಿದೆ.  ಪಂದ್ಯ ಸಂಜೆ 7 ಗಂಟೆಯಿಂದ ಆರಂಭವಾಗಲಿದೆ. ಒಂದು ವೇಳೆ ಮಳೆ ಕಾಣಿಸಿಕೊಂಡರು ಪರಿಸ್ಥಿತಿಯನ್ನ ಎದುರಿಸಲು ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಸ್ಸಾಂ ಕ್ರಿಕೆಟ್ ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!