ವಿಂಡೀಸ್‌ ವಿರುದ್ಧ ಟಿ20 ಕ್ಲೀನ್‌ ಸ್ವೀಪ್‌ ಬಳಿಕ ಶ್ರೀಲಂಕಾ ಪಡೆ ಮಣಿಸಲು ಟೀಂ ಇಂಡಿಯಾ ಸಜ್ಜು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತವರಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಿಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ ಬಳಿಕ ಈಗ ಟೀಂ ಇಂಡಿಯಾ ಶ್ರೀಲಂಕಾವನ್ನು ಟಾರ್ಗೆಟ್‌ ಮಾಡಿದೆ.
ರೋಹಿತ್‌ ಶರ್ಮಾ ಪಡೆ ಶ್ರೀಲಂಕಾ ವಿರುದ್ಧ ಟಿ20 ಸರಣಿ ಪಂದ್ಯವಾಡಲು ಲಖನೌಗೆ ಬಂದಿಳಿದಿದೆ. ಫೆ.24ರಿಂದ ಶ್ರೀಲಂಕಾ ವಿರುದ್ಧ ಅಟಲ್‌ ಬಿಹಾರಿ ವಾಜಪೇಯಿ ಸ್ಟೇಡಿಯಂ ನಲ್ಲಿ ಪಂದ್ಯ ನಡೆಯಲಿದೆ.
ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಯುಜ್ವೇಂದ್ರ ಚಹಲ್ ಸೇರಿದಂತೆ ಹಲವು ಆಟಗಾರರು ಲಖನೌ ಗೆ ಬಂದಿಳಿದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಈ ಸರಣಿಯಲ್ಲಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ರಿಷಭ್‌ ಪಂತ್‌ ಅಲಭ್ಯರಾಗಿದ್ದಾರೆ.
ಫೆ.24ರ ಸಂಜೆ 7ಕ್ಕೆ ಮೊದಲನೇ ಟಿ20 ಪಂದ್ಯ ಪ್ರಾರಂಭವಾಗಲಿದ್ದು, ಧರ್ಮಶಾಲಾದಲ್ಲಿ ಎರಡು ಹಾಗೂ ಮೂರನೇ ಪಂದ್ಯ ನಡೆಯಲಿದೆ. ಇನ್ನು ಮಾ.4ರಿಂದ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ ಸೆಣೆಸಾಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!