ಪಾಕ್‌ ಗೆ ಚೀನಾದಿಂದ 25 ಅತ್ಯಾಧುನಿಕ ಜೆ-10ಸಿ ಯುದ್ಧ ವಿಮಾನಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ಅತ್ಯಾಧುನಿಕ 25 ಜೆ-10 ಸಿ ಯುದ್ಧ ವಿಮಾನಗಳನ್ನು ಹಸ್ತಾಂತರಿಸಲಿದೆ.
ಮೊದಲನೆ ಹಂತದ ಈ ಯುದ್ಧ ವಿಮಾನಗಳನ್ನು ಚೆಂಗ್ಡು ಪ್ರದೇಶದಲ್ಲಿ ಪರೀಕ್ಷಿಸಲಾಗಿದೆ. ಪಾಕಿಸ್ತಾನದ ವಾಯು ಪಡೆಯ ಸಾಮರ್ಥ್ಯ ಹೆಚ್ಚಿಸಲು ಚೀಣಾ ಜೆ-10ಸಿ ವಿಮಾನಗಳನ್ನು ನೀಡುತ್ತಿದೆ.
ಈ ಯುದ್ಧವಿಮಾನಗಳ ಹಾರಾಟದ ಬಗ್ಗೆ ಪಾಕ್‌ ವಾಯುಪಡೆಯ ಪೈಲಟ್‌ ಹಾಗೂ ತಂತ್ರಜ್ಞರು ಟ್ರೈನಿಂಗ್‌ ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ.
ಈಗಾಗಲೇ ಉಭಯ ದೇಶಗಳ ಬಾಂಧವ್ಯ ಬಲಗೊಂಡಿದ್ದು, ರಕ್ಷಣಾ ಸಹಕಾರ ವೃದ್ಧಿಯಾಗುತ್ತಿರುವುದು ಉತ್ತಮ ಸಂದೇಶವಾಗಿದೆ ಎಂದು ಚೀನಾ ವಿಶ್ಲೇಷಕರು ತಿಳಿಸಿದ್ದಾರೆ.
ಈ ಜೆ-10ಸಿ ಫೈಟರ್‌ ಜೆಟ್‌ ನ ಗಾತ್ರ ದೊಡ್ಡದಾಗಿದ್ದು, ಇದು ಅಮೆರಿಕ ನಿರ್ಮಿತ ಎಫ್-16‌ ಫೈಟರ್‌ ಜೆಟ್‌ ಗಿಂತ ಶಕ್ತಿಶಾಲಿಯಾಗಿದೆ. ಇದು ಏರ್‌ ಟು ಏರ್‌ ಕ್ಷಿಪಣಿಗಳ ನಾಲ್ಕನೇ ಜನರೇಷನ್‌ ಅನ್ನು ಕೂಡ ಹೊತ್ತು ಸಾಗಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!