October 1, 2026
Thursday, October 1, 2026
spot_img

India vs West Indies | 800ಕ್ಕೂ ಹೆಚ್ಚು ರನ್‌, ಭರ್ಜರಿ ಚೇಸ್‌; ಆದರೂ ಗಂಭೀರ್‌ ಅಸಮಾಧಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ–ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದಲ್ಲಿ 800ಕ್ಕೂ ಹೆಚ್ಚು ರನ್‌ಗಳು ಹರಿದುಬಂದರೂ, ಪಿಚ್‌ನ ಸ್ವರೂಪದ ಬಗ್ಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಯಾಟರ್‌ಗಳಿಗೆ ಸಂಪೂರ್ಣವಾಗಿ ನೆರವಾಗುವ ಪಿಚ್‌ನಲ್ಲಿ ಬೌಲರ್‌ಗಳಿಗೆ ಯಾವುದೇ ರೀತಿಯ ಸವಾಲು ಉಳಿದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದು, ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನದ ಪೈಪೋಟಿ ಇರಬೇಕು ಎಂದು ಹೇಳಿದ್ದಾರೆ.

ಭಾರತದಿಂದ ಅಪರೂಪದ ಸಾಧನೆ

ಪಂದ್ಯದಲ್ಲಿ ವೆಸ್ಟ್ ಇಂಡೀಸ್ 7 ವಿಕೆಟ್‌ಗೆ 405 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ಕೇವಲ ಎರಡು ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿದ್ದು, ಏಕದಿನ ಕ್ರಿಕೆಟ್‌ನಲ್ಲಿ 400ಕ್ಕೂ ಅಧಿಕ ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಅಪರೂಪದ ಸಾಧನೆ ಮಾಡಿತು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಗಂಭೀರ್ ಹೇಳಿದ್ದೇನು?

ಆದರೆ ಪಂದ್ಯದ ಬಳಿಕ ಮಾತನಾಡಿದ ಗಂಭೀರ್, ಇಂತಹ ಪಿಚ್‌ಗಳು ಬೌಲರ್‌ಗಳಿಗೆ ನ್ಯಾಯ ಒದಗಿಸುವುದಿಲ್ಲ ಎಂದು ಹೇಳಿದರು. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೊಸದಾಗಿ ಕಾಲಿಡುತ್ತಿರುವ ಯುವ ಬೌಲರ್‌ಗಳು ಇಂತಹ ಪರಿಸ್ಥಿತಿಯಲ್ಲಿ ಎದುರಾಳಿಯ 400 ರನ್‌ಗಳ ಮೊತ್ತವನ್ನು ತಡೆಯುವುದು ಕಷ್ಟವಾಗುತ್ತದೆ ಎಂದರು.

ಇದನ್ನೂ ಓದಿ:

ಪ್ರೇಕ್ಷಕರು ಹಾಗೂ ಪ್ರಸಾರಕರ ದೃಷ್ಟಿಯಿಂದ ಇಂತಹ ಪಂದ್ಯಗಳು ಅವರಿಗೆ ಹಬ್ಬವಾಗಿರಬಹುದು. ದಾಖಲೆಗಳ ದೃಷ್ಟಿಯಿಂದಲೂ ಪಂದ್ಯ ಉತ್ತಮವಾಗಿರಬಹುದು. ಆದರೆ ಕ್ರಿಕೆಟ್‌ನ ಮೂಲ ಸ್ವರೂಪದಲ್ಲಿ ಬ್ಯಾಟ್ ಮತ್ತು ಬಾಲ್ ಎರಡಕ್ಕೂ ಸಮಾನ ಅವಕಾಶ ಇರಬೇಕು ಎಂಬುದು ತಮ್ಮ ನಿಲುವು ಎಂದು ಗಂಭೀರ್ ಹೇಳಿದ್ದಾರೆ.

ಪಿಚ್‌ನಿಂದಲೂ ಕನಿಷ್ಠ ನೆರವು ಬೇಕು

ಏಕದಿನ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಮೇಲಿರುವ ಸವಾಲುಗಳು ಈಗಾಗಲೇ ಹೆಚ್ಚಿವೆ. ಫೀಲ್ಡಿಂಗ್ ನಿರ್ಬಂಧಗಳು, ಎರಡು ಹೊಸ ಚೆಂಡುಗಳ ಬಳಕೆ ಹಾಗೂ ಬ್ಯಾಟರ್‌ಗಳ ಹೆಚ್ಚುತ್ತಿರುವ ಆಕ್ರಮಣಕಾರಿ ಆಟದ ನಡುವೆ ಬೌಲರ್‌ಗಳಿಗೆ ಪಿಚ್‌ನಿಂದಲೂ ಕನಿಷ್ಠ ನೆರವು ದೊರೆಯಬೇಕು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

Must Read