ಹೊಸದಿಗಂತ ಡಿಜಿಟಲ್ ಡೆಸ್ಕ್
ಶಿಖರ್ ಧವನ್ ನೇತೃತ್ವದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 3 ವಿಕಟ್ ಗಳ ರೋಚಕ ಜಯ ದಾಖಲಿಸಿತ್ತು. ಇಂದು (ಭಾನುವಾರ) ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ದ್ವಿತೀಯ ಪಂದ್ಯ ನಡೆಯಲಿದ್ದು, ಮೆನ್ ಇನ್ ಬ್ಲೂ ಸರಣಿ ಗೆಲುವಿಗೆ ಎದುರು ನೋಡುತ್ತಿದೆ. ಈ ಪಂದ್ಯ ರಾತ್ರಿ 7:00 ಗಂಟೆಗೆ ಆರಂಭವಾಗಲಿದೆ. ಭಾರತವು ಕೆರಿಬಿಯನ್ನರ ವಿರುದ್ಧ ಇಂದು ಗೆದ್ದರೆ, ಪಾಕಿಸ್ತಾನವನ್ನು ಹಿಂದಿಕ್ಕಿ ವಿಶ್ವ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಳ್ಳಲಿದೆ.
ಇಂದು ಗೆದ್ದರೆ ಭಾರತಕ್ಕೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2.0 ಯಲ್ಲಿ ಸರಣಿಯನ್ನು ಗೆಲ್ಲುವ ಅವಕಾಶವಿದೆ. ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯನ್ನು ಗೆಲ್ಲಲು ಭಾರತ ಯಶಸ್ವಿಯಾದರೆ, ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಸತತವಾಗಿ ಅತಿಹೆಚ್ಚು ದ್ವಿಪಕ್ಷೀಯ ಏಕದಿನ ಸರಣಿ ಜಯಗಳಿಸಿದ ತಂಡ ಎನಿಸಿಕೊಳ್ಳಲಿದೆ. ಸದ್ಯ ಭಾರತ ಪಾಕ್ ತಂಡಗಳು ಒಂದೇ ಎದುರಾಳಿ ವಿರುದ್ಧ ಸತತ 11 ದ್ವಿಪಕ್ಷಿಯ ಸರಣಿಗಳನ್ನು ಗೆದ್ದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಭಾರತ ಬಲಿಷ್ಠ ವಿಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದರೆ, ಪಾಕ್ ದುರ್ಬಲ ತಂಡವೆಂಬ ಹಣೆಪಟ್ಟಿ ಹೊತ್ತಿರುವ ಜಿಂಬಾಬ್ವೆ ವಿರುದ್ಧ ಈ ದಾಖಲೆ ನಿರ್ಮಿಸಿದೆ. ಈ ಸರಣಿಯನ್ನು ಗೆದ್ದರೆ ಭಾರತವು 12 ದ್ವಿಪಕ್ಷಿಯ ಸರಣಿ ಗೆಲುವಿನೊಂದಿಗೆ ಪಾಕಿಸ್ತಾನವನ್ನು ಹಿಂದಿಕ್ಕಿ ವಿಶ್ವದಾಖಲೆಯನ್ನು ಬರೆಯಲಿದೆ.
ತಂಡ ಹೀಗಿದೆ...
ಭಾರತ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ವೆಸ್ಟ್ ಇಂಡೀಸ್: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ರೋವ್‌ಮನ್ ಪೊವೆಲ್, ಜೇಡನ್ ಸೀಲ್ಸ್.