ಭಾರತ-ವೆಸ್ಟ್ ಇಂಡೀಸ್​ ಕ್ರಿಕೆಟ್​​​ ಸರಣಿ: ಸ್ಥಳ ಘೋಷಿಸಿದ ಬಿಸಿಸಿಐ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಸಿಸಿಐ ಮುಂಬರುವ ಪೇಟಿಎಂ ವೆಸ್ಟ್ ಇಂಡೀಸ್ ಭಾರತ ಪ್ರವಾಸದ ಸ್ಥಳಗಳಲ್ಲಿ ಬದಲಾವಣೆಯನ್ನು ಘೋಷಿಸಿದೆ.
ಫೆಬ್ರವರಿ ತಿಂಗಳಲ್ಲಿ ಭಾರತದ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ತಂಡ ಮೂರು ಏಕದಿನ ಹಾಗೂ ಮೂರು ಟಿ-20 ಕ್ರಿಕೆಟ್​​ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಅದಕ್ಕಾಗಿ ಇಂದು ನಡೆದ ಮಹತ್ವದ ಸಭೆಯಲ್ಲಿ ಸ್ಥಳದ ನಿರ್ಧಾರ ಕೈಗೊಳ್ಳಲಾಗಿದ್ದು, ಅಹ್ಮದಾಬಾದ್​ ಹಾಗೂ ಕೋಲ್ಕತ್ತಾ ಮೈದಾನಗಳಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.
ಬಿಸಿಸಿಐ ಈ ಹಿಂದೆ ಆರು ಸ್ಥಳ ನಿಗದಿ ಮಾಡಿತ್ತು. ಆದರೆ, ದೇಶದಲ್ಲಿ ಕೊರೋನಾ ಜೋರಾಗಿರುವ ಕಾರಣ ಇದೀಗ ಕೇವಲ ಎರಡು ಸ್ಥಳಗಳಲ್ಲಿ ಪಂದ್ಯ ನಡೆಸಲು ನಿರ್ಧಾರ ಕೈಗೊಂಡಿದೆ. ಅಹ್ಮದಾಬಾದ್​, ಕೋಲ್ಕತ್ತಾ ಜೊತೆಗೆ ಜೈಪುರ್, ಕಟಕ್, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲೂ ಪಂದ್ಯ ನಡೆಸುವ ಯೋಜನೆ ಹಾಕಿಕೊಂಡಿತ್ತು.
ಭಾರತ-ವೆಸ್ಟ್ ಇಂಡೀಸ್ ನಡುವೆ ಫೆಬ್ರವರಿ 6ರಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಅಹ್ಮದಾಬಾದ್​ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ತದನಂತರ ಟಿ-20 ಕ್ರಿಕೆಟ್​ ಸರಣಿ ಆಡಲು ಉಭಯ ತಂಡಗಳು ಕೋಲ್ಕತ್ತಾಗೆ ಪ್ರವಾಸ ಕೈಗೊಳ್ಳಲಿವೆ. ಫೆ. 16ರಿಂದ ಪಂದ್ಯಗಳು ಆರಂಭವಾಗಲಿವೆ.
ಫೆ. 6, ಫೆ, 9 ಹಾಗೂ ಫೆ. 11ರಂದು ಅಹ್ಮದಾಬಾದ್​ನಲ್ಲಿ ಏಕದಿನ ಸರಣಿ ಹಾಗು ಫೆ.16,ಫೆ, 18 ಹಾಗೂ ಫೆ. 20ರಂದು ಕೋಲ್ಕತ್ತಾದಲ್ಲಿ ಟಿ20 ಪಂದ್ಯ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!