ಪಾಕ್ ಮಾರ್ಗ ಬಳಸದೆ ಅಫ್ಘಾನಿಸ್ತಾನಕ್ಕೆ 20 ಸಾವಿರ ಮೆಟ್ರಿಕ್ ಟನ್ ಗೋಧಿ ರಫ್ತು ಮಾಡಲಿದೆ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವು ಪಾಕಿಸ್ತಾನದ ಮಾರ್ಗ ಬಳಸದೆ ಅಫ್ಘಾನಿಸ್ತಾನಕ್ಕೆ ಗೋಧಿ ರಫ್ತು ಮಾಡಲಿದೆ. ಯುಎನ್‌ವಿಎಫ್‌ಪಿ ಸಹಭಾಗಿತ್ವದಲ್ಲಿ ಅಫ್ಘಾನಿಸ್ತಾನಕ್ಕೆ 20 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ರಫ್ತು ಮಾಡಲಿದೆ, ಆದರೆ ಇಲ್ಲಿ ಪಾಕಿಸ್ತಾನದ ಮಾರ್ಗವನ್ನು ಭಾರತ ಬಳಸೋದಿಲ್ಲ.

ಇರಾನ್‌ನ ಚಬಹಾರ್ ಬಂದರಿನ ಮೂಲಕ ಗೋಧಿಯನ್ನು ರಫ್ತು ಮಾಡಲಾಗುತ್ತಿದೆ. ಭಾರತ ಮತ್ತು ಐದು ಮಧ್ಯ ಏಷ್ಯಾ ರಾಷ್ಟ್ರಗಳು ಭಯೋತ್ಪಾದನೆ ಮತ್ತು ಉಗ್ರವಾದದ ಪ್ರಾದೇಶಿಕ ಬೆದರಿಕೆಗಳನ್ನು ಜಂಟಿಯಾಗಿ ಎದುರಿಸುವ ಮಾರ್ಗಸೂಚಿಗಳ ಕುರಿತು ಚರ್ಚೆ ನಡೆಸಿವೆ.

ಈ ಸಭೆಯಲ್ಲಿ ಪಾಕಿಸ್ತಾನದ ಮೂಲಕ ರಫ್ತು ಮಾಡುವ ಬದಲು ಇರಾನ್ ಮೂಲಕ ರಫ್ತು ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಅಫ್ಘಾನಿಸ್ತಾನದ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ತಾಲಿಬಾನ್‌ಗಳ ವಶದಲ್ಲಿರುವ ಅಫ್ಘಾನಿಸ್ತಾನದಿಂದ ಭಾರತದ ರಾಜತಾಂತ್ರಿಕರನ್ನು ಹಿಂಪಡೆಯಾಲಗಿದೆ. ಭಾರತ-ಆಫ್ಘನ್ ಸ್ನೇಹದಿಂದ ಭಾರತಕ್ಕೆ ಸಾಕಷ್ಟು ಲಾಭ ಇದೆ.

ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತನ್ನ ಸರಕು ಸಾಗಣೆಗೆ ಪಾಕಿಸ್ತಾನದ ಮೂಲಕ ಇದ್ದ ಭೂಮಾರ್ಗದ ಅವಲಂಬನೆಯನ್ನು ಮೋದಿ ಸರ್ಕಾರ ತಪ್ಪಿಸಿದೆ. ಇರಾನ್‌ನ ಚಬಾಹರ್ ಬಂದರನ್ನು ಅಭಿವೃದ್ಧಿಪಡಿಸಿದ್ದು, ಭಾರತದಿಂದ ಇರಾನ್, ಇರಾನ್‌ನಿಂದ ಅಫ್ಘಾನಿಸ್ತಾನ, ಅಲ್ಲಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಮಾಗ್ರಿ ರಫ್ತು ಮಾಡುವ ಹೊಸ ದಾರಿಯನ್ನು ಸೃಷ್ಟಿಸಿಕೊಂಡಿತ್ತು.

ಈ ಹಿಂದೆ ಭಾರತ ಪಾಕ್ ರಸ್ತೆ ಮೂಲಕ 40 ಸಾವಿರ ಟನ್ ಗೋಧಿಯನ್ನು ಆಫ್ಘನ್‌ಗೆ ನೀಡಿದೆ. ಆದರೆ ಇಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗಿತ್ತು. ಹಾಗಾಗಿ ಮಾರ್ಗ ಬದಲಾಯಿಸುವ ನಿರ್ಧಾರಕ್ಕೆ ಬರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!